October 5, 2024
ದಿವಿನ್ ಮಗ್ಗಲಮಕ್ಕಿ
ಮೊ : 9482000529
ಹಾಗೇ ಸುಮ್ಮನೆ ಊಹೆ ಮಾಡಿಕೊಳ್ಳಿ.
ಭೂಮಿಯಿಂದ ಅಂತರಿಕ್ಷ ನೌಕೆಯೊಂದರಲ್ಲಿ‌ ಕುಳಿತು #ಸೆಕೆಂಡಿಗೆ ಮೂರು‌ ಲಕ್ಷ ಕಿಮೀ ವೇಗದಲ್ಲಿ ಸುಮಾರು #ನಾಲ್ಕುವರೆ_ವರ್ಷ ಸಾಗಿದ ನಂತರ ಗ್ರಹ(Planet)ವೊಂದು ಸಿಗುತ್ತೆ. ಅಲ್ಲಿ ಒಂಬತ್ತು ಹತ್ತು ಅಡಿ ಎತ್ತರದ ನೀಲಿ ಬಣ್ಣದ, ಹಳದಿ ಕಣ್ಣಿನ, ಬಾಲ ಹೊಂದಿರುವ ವಿಶೇಷ ರೀತಿಯ ಮನುಷ್ಯನನ್ನ ಹೋಲುವ ಒಂದು ಜನಾಂಗ.
ಆ ಜನಾಂಗದಲ್ಲೇ ಹತ್ತಾರು ಕುಲಗಳು, ಬಣ್ಣ ಬಣ್ಣದ ವಿವಿಧ ಆಕಾರದ ಪ್ರಾಣಿ,ಪಕ್ಷಿ,ಸಸ್ಯ ಸಂಕುಲಗಳು,ವಿಭಿನ್ನ ಬಗೆಯ ಜಲಚರಗಳು. ಅವುಗಳ ಬಣ್ಣ ಬಣ್ಣದ ಬದುಕು,ಅತೀಂದ್ರಿಯ ಶಕ್ತಿಗಳು,ಪ್ರಾಣಿ ಪಕ್ಷಿಗಳೊಂದಿಗೆ ಈ ಜನಾಂಗದ ಭಾವನಾತ್ಮಕ ಬಂಧನ, ಇವುಗಳನ್ನ ಕೆಣಕಿ ನಾಶ ಮಾಡಲು ಭೂಮಿಯಿಂದ ಬಂದ ವಿನಾಶಕಾರಿ ಆಧುನಿಕ ಮನುಷ್ಯ, ಇವರಿಬ್ಬರ ನಡುವಿನ ಸಂಘರ್ಷ,ಹೋರಾಟ,  ಪ್ರೀತಿ,ಪ್ರೇಮ,ತ್ಯಾಗ,ಸೋಲು,ಗೆಲುವು….
Creativity ಬಗ್ಗೆ ಮಾತಾಡೋವಾಗ Sky is The Limit ಅಂತಾರೆ. ಅದೇ Sky ನ ಪರಿಧಿಯಾಚೆಗೆ ಊಹೆ ಮಾಡಿಕೊಂಡ ವೈಜ್ಞಾನಿಕ ಕಲ್ಪನಾ ಜಗತ್ತೊಂದನ್ನು ನೋಡಬೇಕೆಂದರೆ ನೀವೀ ಸಿನೆಮಾ‌ ನೋಡಲೇಬೇಕು. ಅದರೆಸರು “AVATAR 2-The way of Water”
2022ರ ಡಿಸೆಂಬರ 16 ರಂದು ಜಗತ್ತಿನಾದ್ಯಂತ ಬಿಡುಗಡೆಯಾದ ಖಗೋಳ ವಿಜ್ಞಾನದ ಹಿನ್ನೆಲೆಯ ಕ್ರಿಯಾತ್ಮಕ ಚಿತ್ರ.ಈ ಸಿನಿಮಾ ನೋಡೋ ಮೊದಲು 2009ರಲ್ಲಿ ಬಿಡುಗಡೆಯಾಗಿದ್ದ ಇದರ ಭಾಗ -1 ನ್ನು ನೋಡಿದ್ದರೆ ಚಂದ. ಇಂತಹದ್ದೊಂದು ದೃಶ್ಯ ಕಾವ್ಯವನ್ನು‌ ನಿರ್ಮಿಸಿದ್ದು ಜೇಮ್ಸ್ ಕ್ಯಾಮರೂನ್ ಎಂಬ ಕಲೆಗಾರ. ಆತನೆಸರು ಜಗತ್ತಿಗೇ ಚಿರಪರಿಚಿತ. ಆತ ನೀಡಿದೆಲ್ಲ‌ ಚಿತ್ರಗಳು ಸಾಲು ಸಾಲು ಹಿಟ್ ಆಗಿವೆ. Science ಮತ್ತು Fiction ಗಳನ್ನು ಹದವಾಗಿ ಬೆರೆಸುವುದರಲ್ಲಾತ ನಿಸ್ಸೀಮ.
ಟೈಟಾನಿಕ್, ಟ್ರೂ ಲೈಸ್,ಟರ್ಮಿನೇಟರ್,ಏಲಿಯೆನ್ಸ್,ಅವತಾರ್ ಎಲ್ಲವುಗಳು ಇವನ ಗರಡಿಯಲ್ಲೇ ಮೂಡಿ ಬಂದಿರೋದು. ಅವತಾರ ಎರಡನೇ ಭಾಗಕ್ಕೆ ಖರ್ಚು ಮಾಡಿರೋದು‌ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳು. ಬಿಡುಗಡೆಯಾದ ಒಂದೇ ತಿಂಗಳಿಗೆ ಈ ಸಿನಿಮಾ ಜಗತ್ತಿನಾದ್ಯಂತ ಬಾಚಿಕೊಂಡಿರೋದು ಹದಿನಾರು ಸಾವಿರ ಕೋಟಿಗೂ ಹೆಚ್ಚು…..
ಭೂಮಿಯಿಂದ 4.6 ಲೈಟ್ ಇಯರ್ ಗಳಷ್ಟು ದೂರದಲ್ಲಿ ಪಂಡೋರ ಎಂಬ ಗ್ರಹ,ಅದರಲ್ಲಿ ನಾವಿ(NAVI)ಗಳೆಂಬ ಮನುಷ್ಯನನ್ನು ಹೋಲುವ,ನೀಲಿ ಬಣ್ಣದ ಜನಾಂಗ.
ಆ ಜನಾಂಗದಲ್ಲಿ ಹತ್ತಾರು ಕುಲಗಳು. ಆ ಕುಲಗಳಲ್ಲೊಂದು METKAYINA. ಆ ಗುಂಪಿಗೊಬ್ಬ ಮುಖಂಡ.ಅವನಿಗೊಬ್ಬಳು ಮಗಳು(Neytiri).
ಭೂಮಿಯನ್ನೆಲ್ಲ ಬಗೆದು ಹಾಳುಗೆಡವಿದ ಮನುಷ್ಯರ‌ ಅತ್ಯಾಧುನಿಕ ಮಿಲಿಟರಿ ತಂಡ(ವಿಲನ್ Quartich) ಪಂಡೋರ ಗೆ ಬಂದು ನಾವಿಗಳಂತೆಯೆ ಇರುವ ರೂಪವೊಂದನ್ನು(ಅವತಾರ/ಅವತಾರ್) ಸೃಷ್ಟಿ ಮಾಡಿ ಕಥಾನಾಯಕ JAKE SULLY ಯನ್ನು ನಾವಿಗಳ ನಾಡಿಗೆ ಕಳುಹಿಸಿ ಅವರನ್ನು ನಾಶ ಮಾಡಿ ಅವರ ಶಕ್ತಿ,ಸಂಪತ್ತನ್ನೆಲ್ಲ ದೋಚುವ ಪ್ಲಾನ್ ಮಾಡುತ್ತಾರೆ.
ಹೀಗೆ ಬಂದ ಜೇಕ್ ನಾವಿಗಳ ಯುವರಾಣಿ ನೆಟೇರಿಯೊಂದಿಗೆ ಪ್ರೇಮಪಾಶಕ್ಕೆ ಸಿಲುಕಿ,ಅವರುಗಳ ಜೀವನ ಶೈಲಿ,ನಂಬಿಕೆ,ಅಮಾಯಕತೆಗೆ ಮನಸೋತು ತನ್ನನ್ನು ಸೃಷ್ಟಿಸಿದ ಮನುಷ್ಯರ ವಿರುದ್ದವೇ ಹೋರಾಡಿ ಮನುಷ್ಯರನ್ನು ವಾಪಾಸು ಭೂಮಿಗೆ ಹೊಡೆದೋಡಿಸುವ ಕಥೆಯನ್ನ ಅವತಾರ್ ಒಂದನೇ ಭಾಗ ಹೇಳಿತ್ತು.
ಅವತಾರ್-1 ಪಂಡೋರದ ಭೂ ಭಾಗದ ಅರಣ್ಯದಲ್ಲಿ ನಡೆಯುವ ಕಥಾಹಂದರ. ಹದಿನಾಲ್ಕು ವರ್ಷಗಳ ನಂತರ ಬಿಡುಗಡೆಯಾದ ಅವತಾರ್-2 ಅದಕ್ಕಿಂತಲೂ‌ ಹೆಚ್ಚಿನ‌ ಕ್ರಿಯಾತ್ಮಕತೆ,ಕಲ್ಪನೆ,ವಿಷುವಲ್ ಎಫೆಕ್ಟನೊಂದಿಗೆ ಬಿಡುಗಡೆಯಾಗಿದೆ. ಈ‌ ಹದಿನಾಲ್ಕು‌ ವರ್ಷಗಳಲ್ಲಿ ಜೇಕ್ ಮತ್ತು‌ ನೆಟೇರಿಗೆ ಮೂರು‌ ಮಕ್ಕಳೂ ಇರುತ್ತಾರೆ.ಜೊತೆಗಿಬ್ಬರು ಸಾಕು ಮಕ್ಕಳೂ ಇರುತ್ತಾರೆ. ಜೇಕ್ ಮೇಲೆ‌ ಸೇಡು ತೀರಿಸಿಕೊಳ್ಳಲು ಮನುಷ್ಯರು ಮತ್ತೆ ಅವತಾರ್‌ ರೂಪ ಧರಿಸಿ ಪಂಡೋರಾಗೆ‌ ಲಗ್ಗೆ ಇಟ್ಟು ನಾವಿಗಳ‌ ನಾಶಕ್ಕೆ ರೆಡಿಯಾಗುತ್ತಾರೆ.
ವಿಷಯ ತಿಳಿದ ಜೇಕ್ ನಮ್ಮಿಂದಾಗಿ ಎಲ್ಲ Metkayina ಕುಲಕ್ಕೆ ಕಷ್ಟ ಎಂದು ಕುಟುಂಬ ಸಮೇತ ದೂರ ಹೋಗಿ ನೀರಿನಲ್ಲಿ‌ ಪಾರುಪತ್ಯ ಸಾಧಿಸಿರುವ ನಾವಿಗಳದೇ ಇನ್ನೊಂದು‌ ಪಂಗಡವಾದ OMATICAYA ಗಳಲ್ಲಿ‌ ಆಶ್ರಯ ಪಡೆದು ತಲೆಮರೆಸಿಕೊಳ್ಳುತ್ತಾರೆ. ಆದರೆ ಮನುಷ್ಯರ ಆಧುನೀಕತೆ ಮತ್ತು‌ ಸಂಪತ್ತಿನ ಕೊಳ್ಳೆ‌ ಹೊಡೆಯುವಿಕೆಯ ಭಾಗದಲ್ಲಿ ಮತ್ತೆ ಜೇಕ್ ನ ಮಕ್ಕಳು‌‌ ಮನುಷ್ಯರೊಂದಿಗೆ ಸಿಕ್ಕಿ‌ ಹಾಕಿಕೊಳ್ಳುತ್ತಾರೆ. ಸೆರೆ ಹಿಡಿದ ಮಕ್ಕಳನ್ನು ಬಿಡಿಸಿಕೊಂಡು ಬರಲು‌ ಹೋರಾಡುವ,‌ಬದುಕಿಗಾಗಿ‌ ಅರಣ್ಯದಿಂದ‌ ಬಂದು ನೀರಿನಲ್ಲಿ‌ ಬದುಕು ಕಟ್ಟಿಕೊಳ್ಳುವ,ಅವಮಾನಗಳನ್ನು‌ ಸಹಿಸಿಕೊಳ್ಳುವ,ಮಗನನ್ನು ಕಳೆದುಕೊಳ್ಳುವ,ಕುಟುಂಬವನ್ನು‌ ಉಳಿಸಿಕೊಳ್ಳೋಕೆ‌ ಹೋರಾಡುವ ಮುಂದಿನ‌ ಕಥಾ‌ಹಂದರವೇ “ಅವತಾರ್-2 The way of Water”.
ಸಿನಿಮಾದ ಕಥೆಗೆ ತಕ್ಕಂತೆ ಒಂದೊಂದು ಫ್ರೇಮುಗಳು ನಿಮ್ಮನ್ನು ಮಂತ್ರ ಮುಗ್ಧವನ್ನಾಗಿಸುತ್ತವೆ. ಅದರಲ್ಲೂ ವಿಶೇಷವಾಗಿ ಪ್ರಾಣಿ ಪಕ್ಷಿಗಳನ್ನು ಸೃಷ್ಟಿಸಿರು ಬಗೆಯೇ ವಂಡರ್ಫುಲ್.
ಬಣ್ಣ ಬಣ್ಣದ ದೊಡ್ಡದಾದ ಹದ್ದುವೊಂದರಂತೆ ನಾವಿಗಳನ್ನು ಹೊತ್ತೊಯ್ಯುವ ಗುಡ್ಡಗಳಲ್ಲಿ ಕುಳಿತಿರುವ ಪಕ್ಷಿಯ ಹೆಸರು IKRAN ಎಂದು.
ಇಕ್ರಾನ್ ಗಳನ್ನೇ ಹೆದರಿಸಿ ಓಡಿಸುವ ಅತೀ ದೊಡ್ಡ ಪಕ್ಷಿಯ ಹೆಸರು TORUK. Hump Back whales ಗಳಂತೆ ದೊಡ್ಡದಾಗಿ ಕಾಣುವ Omaticayaಗಳ ಜೊತೆ ಭಾವಬೆಸುಗೆ ಹೊಂದಿರುವ ಸಮುದ್ರ ಜೀವಿಯ ಹೆಸರು TULKUN. ಆ ಟುಲ್ಕುನ್ ಗಳಲ್ಲೇ ದೊಡ್ಡದಾದ ಮತ್ತು ತಪ್ಪಾಗಿ ವಿಲನ್ ಆಗಿ ಬಿಂಬಿತವಾಗಿದ್ದ ಕೊನೆಗೆ ಹೀರೋವಾಗಿ ಮೆರೆದ PAYAKAN
ಉದ್ದ ಕುತ್ತಿಗೆಯ ಸೀಲ್ ನಂತೆ ಕಾಣುವ ILU , ದೊಡ್ಡ ಮೊಸಳೆಯೊಂದಕ್ಕೆ ಹಾರಲು ರೆಕ್ಕೆಗಳಿದ್ದರೆ ಹೇಗಿರುತ್ತೋ ಹಾಗೆ ಕಾಣುವ TSURUK.
ಎಲ್ಲದಕ್ಕಿಂತ ಇವೆಲ್ಲ ಪಕ್ಷಿ ,ಪ್ರಾಣಿಗಳು ಜೀವಮಾನದಲ್ಲಿ ಒಮ್ಮೆ ಮಾತ್ರ ಒಬ್ಬ ನಾವಿಯೊಂದಿಗೆ ಮಾತ್ರ ಬಾಂಡಿಂಗ್(Neuro Connection) ಮಾಡಿಕೊಳ್ಳುವ ಕಲ್ಪನೆಯೆ ಸೂಪರ್.
ಎಲ್ಲ ಮರ ಗಿಡಗಳ ಬೇರುಗಳು ಪರಸ್ಪರ ಬೇರುಗಳ ಮುಖಾಂತರ ಕನೆಕ್ಟ್ ಆಗಿರೋದು(EYWA), ಅಷ್ಟೇ ಅಲ್ಲದೆ ಬಗೆ ಬಗೆಯ ಹೂವುಗಳು,ಮೀನುಗಳು,ಜಲಚರಗಳು,ಫ್ಯಾನಿನಂತೆ ತಿರುಗುತ್ತ ಹಾರುವ ಓತಿಗಳು,ಜೆಲ್ಲಿ ಫಿಶ್ನಂತ ಕ್ರಿಯೇಷನ್ನುಗಳು ಒಟ್ಟಾರೆ ಸಿನಿಮಾವೊಂದು‌ ಮಾಯಾಲೋಕ.
(ಸಾಧ್ಯವಾಧರೆ 3D/4D ಸ್ಕ್ರೀನ್ ಅಲ್ಲಿ‌ ನೋಡಿ.
ಮಕ್ಕಳಲ್ಲಿ ಖಗೋಳ ವಿಜ್ಞಾನ,ಜೀವ ವೈವಿಧ್ಯತೆ ಬಗ್ಗೆ ಆಸಕ್ತಿ ಹುಟ್ಟಿಸುವ ಸಿನೆಮಾ‌.)

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ