October 5, 2024

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀಶ್ರೀಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಯವರ 10ನೇ ಸಂಸ್ಮರಣಾ ಮತ್ತು 78ನೇ ಜಯಂತುತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶದ ರಾಜ್ಯಮಟ್ಟದ ಜಾನಪದ ಗೀತಾಗಾಯನ ಸ್ಪರ್ಧೆಯಲ್ಲಿ ಮೂಡಿಗೆರೆ ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘದ ತಂಡ ತೃತೀಯಾ ಬಹುಮಾನ ಗಳಿಸಿದೆ.

ಜನವರಿ 17ರಂದು ಆದಿಚುಂಚನಗಿರಿಯಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತ ಆಯ್ದ 24 ತಂಡಗಳು ಭಾಗವಹಿಸಿದ್ದವು.

ಮೂಡಿಗೆರೆ ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ರೀಮತಿ ಕಲಾ ರಾಜಣ್ಣ ಕೆಂಬತ್ತಮಕ್ಕಿ, ಸದಸ್ಯರಾದ ಶ್ರೀಮತಿ ಸುಚಿತ್ರ ಪ್ರಸನ್ನ ಗೌಡಹಳ್ಳಿ, ಶ್ರೀಮತಿ ಪೂರ್ಣ ಪ್ರಭಾಕರ್ ಉದುಸೆ, ಶ್ರೀಮತಿ ಅಶ್ವಿನಿ ಸಂತೋಷ್ ಸಾರಗೋಡು, ಶ್ರೀಮತಿ ಸುಕನ್ಯ ಉಮೇಶ್, ಶ್ರೀಮತಿ ಕಸ್ತೂರಿ ಯೋಗೇಶ್ ಮಾಗರವಳ್ಳಿ, ಶ್ರೀಮತಿ ಸುಚೇತ ದಿನೇಶ್ ದೇವರುಂದ, ಶ್ರೀಮತಿ ಸುಭದ್ರ ನಾರಾಯಣಗೌಡ ಗೌತುವಳ್ಳಿ ಇವರು ಬಹುಮಾನ ವಿಜೇತ ತಂಡದ ಸದಸ್ಯರಾಗಿದ್ದರು. ಮೂಡಿಗೆರೆ ತಂಡವು “ಚುಂಚನಗಿರಿ ಚಂದನೋಡಿರೋ, ನಮ್ಮ ಭೈರವನ ಗಿರಿಗೆ ಬನ್ನಿರೋ” ಸಮೂಹಗಾನವನ್ನು ಹಾಡಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಶ್ರೀಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮಿಯವರ ದಿವ್ಯ ಸಾನಿಧ್ಯದಲ್ಲಿ ಜನವರಿ 12ರಿಂದ 18ರವರೆಗೆ ಚುಂಚಾದ್ರಿ ಉತ್ಸವ ನಡೆಯುತ್ತಿದೆ. ಪ್ರತಿದಿನ ವಿಶೇಷ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.

ನಿನ್ನೆ ನಡೆದ ಮಹಿಳಾ ಸಮಾವೇಶದಲ್ಲಿ ರಾಜ್ಯದಾದ್ಯಂತ ಸಾವಿರಾರು ಮಹಿಯರು ಭಾಗವಹಿಸಿದ್ದರು.

ಮೂಡಿಗೆರೆ ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘದಿಂದ 50ಕ್ಕೂ ಹೆಚ್ಚು ಸದಸ್ಯೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಗಳಾಗಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ