October 5, 2024

ಮೂಡಿಗೆರೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಬೀಜುವಳ್ಳಿಯಲ್ಲಿ ಮುದ್ರೆಮನೆ ಗ್ರೂಪ್ಸ್ ರವರು ನಿರ್ಮಿಸಿರುವ “ಮಾನ್ಸಿ ಎನ್‍ಕ್ಲೇವ್” ಗೇಟೆಡ್ ಕಮ್ಯುನಿಟಿ ವಸತಿ ಸಮುಚ್ಚಯವನ್ನು ಭಾನುವಾರ ಅನಾವರಣ ಮಾಡಲಾಯಿತು.

ಸಂಕ್ರಾತಿ ಹಬ್ಬದಂದು ನಡೆದ ಸರಳ ಕಾರ್ಯಕ್ರಮದಲ್ಲಿ ಶ್ರೀಮತಿ ಮೋಹಿನಿ ಸಿದ್ದೇಗೌಡ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕ ಎಂ.ಪಿ. ಕುಮಾರಸ್ವಾಮಿ, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಕಾಫಿಕೋರ್ಟ್ ಅಧ್ಯಕ್ಷ ಡಿ.ಬಿ. ಜಯಪ್ರಕಾಶ್, ಮುದ್ರೆಮನೆ ಕಾಫಿ ಅಂಡ್ ಸ್ಪೈಸಸ್ ಮಾಲೀಕ ಬಿ.ಎಸ್. ಸಂತೋಷ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್. ಸಂತೋಷ್ ಅವರು ಇದೊಂದು ಮಹತ್ವಾಕಾಂಕ್ಷೆಯ ವಸತಿ ಯೋಜನೆಯಾಗಿದೆ. ಸುಮಾರು 30 ಎಕರೆ ವಿಸ್ತೀರ್ಣದಲ್ಲಿ ಈ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಇಂತಹ ಒಂದು ಮಾದರಿ ವಸತಿ ಸಮುಚ್ಚಯವನ್ನು ನಿರ್ಮಿಸಬೇಕು ಎಂಬುದು ನನ್ನ ದಶಕಗಳ ಕನಸಾಗಿತ್ತು. ಮಲೆನಾಡಿನ ಜನತೆಗೆ ತಮ್ಮ ಊರಿನಲ್ಲೇ ಸೀಮಿತ ವೆಚ್ಚದಲ್ಲಿ ಉನ್ನತ ದರ್ಜೆಯ ಜೀವನ ತಾಣವನ್ನು ಕಲ್ಪಿಸಬೇಕು ಎಂಬ ದ್ಯೇಯವನ್ನು ಯೋಜನೆ ಹೊಂದಿದೆ.

ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ನಾಣ್ನುಡಿಯಂತೆ ಈ ಯೋಜನೆಯ ಹಿಂದೆ ಲಾಭ ಗಳಿಕೆಯ ಉದ್ದೇಶಕ್ಕಿಂತ ನಾನು ಜೀವಿಸುವ ತಾಣದಲ್ಲಿ ಏನಿರಬೇಕು ಎಂದು ಕನಸು ಕಂಡಿದ್ದೆನೋ ಅದೆಲ್ಲವನ್ನೂ ಇಲ್ಲಿ ಸಾಕಾರ ಮಾಡುತ್ತಿದ್ದೇನೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಾನ್ಸಿ ಎನ್ ಕ್ಲೇವ್ ನಿವೇಶನ ಆಸಕ್ತ  ಆಹ್ವಾನಿತರು ಭಾಗವಹಿಸಿ ವಿಶಿಷ್ಟವಾದ ವಸತಿ ಸಮುಚ್ಚಯವನ್ನು ವೀಕ್ಷಿಸಿ ಶುಭ ಹಾರೈಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ