October 5, 2024

ನ್ಯಾಯಾಲಯಗಳಲ್ಲಿ ಹಣಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಆರೋಪಿಗಳಿಗೆ ಜಾಮೀನು ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಶಿವಮೊಗ್ಗ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂದಿತ ಆರೋಪಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಕೆ.ಎಂ. ರಸ್ತೆ ನಿವಾಸಿಯಾಗಿದ್ದ ಸುಂದರಶೆಟ್ಟಿ(72) ಎಂದು ಗುರುತಿಸಲಾಗಿದೆ.

ಜನವರಿ 6ರಂದು ರಾತ್ರಿ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸುಂದರಶೆಟ್ಟಿ ಜಾಮೀನು ನೀಡಲು ಬಂದಿದ್ದ. ಬಿ.ಎಂ.ಟಿ.ಸಿ. ನಿರ್ವಾಹಕ 57 ವರ್ಷ ಎಂದು ಗುರತಿನ ಚೀಟಿ ಹೊಂದಿದ್ದ. ಗುರುತಿನ ಚೀಟಿ ಮೇಲೆ ಅಂಟಿಸಿದ್ದ ಹಾಳೆಯನ್ನು ಕಿತ್ತು ಪರಿಶೀಲಿಸಿದಾಗ ಸುಂದರಶೆಟ್ಟಿಯ ಖತರ್ನಾಕ್ ಕೃತ್ಯ ಬಯಲಾಗಿದೆ. ಆತ ತಂದಿದ್ದು ನಕಲಿ ಗುರುತಿನ ಚೀಟಿ ಎಂದು ಗೊತ್ತಾಗಿದೆ.

ನಕಲಿ ಜಾಮೀನು ನೀಡುವುದೇ ದಂಧೆ :

ಸದಾ ನ್ಯಾಯಾಲಯದ ಆವರಣದಲ್ಲಿಯೇ ಇದ್ದುಕೊಂಡು ಹಣಕ್ಕಾಗಿ ಆರೋಪಿಗಳಿಗೆ ಜಾಮೀನು ನೀಡುವುದೇ ಸುಂದರಶೆಟ್ಟಿಯ ದಂಧೆಯಾಗಿತ್ತು.  ಪೊಲೀಸರು ವಿಚಾರಣೆ ನಡೆಸಿದಾಗ ಒಂದೊಂದೇ ವಂಚನೆಗಳನ್ನು ಹೊರಹಾಕಿದ್ದಾನೆ. ಆತ ಸಲ್ಲಿಸಿದ ಆಧಾರ್ ಕಾರ್ಡ್ ಕೂಡ ಮೂಲ ಪ್ರತಿ ಆಗಿರಲಿಲ್ಲ.

ಜಾಮೀನು ನೀಡುವಾಗ ಘೋಷಣಾ ಪ್ರಮಾಣ ಪತ್ರದಲ್ಲಿ ತಿಳಿಸಿದಂತೆ ಬೇರೆ ಯಾರಿಗೂ ಜಾಮೀನು ನೀಡಿಲ್ಲ ಎಂದು ಸುಳ್ಳು ಹೇಳಿದ್ದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರಿಗೆ ಇಲಾಖೆಯ ಜೋಸೆಫ್ ಎಂಬುವವರ ಗುರುತಿನ ಚೀಟಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಬಿ.ಎಂ.ಟಿ.ಸಿ. ನಕಲಿ ಕಾರ್ಡ್ ಗಳನ್ನು ಸೃಷ್ಟಿರುವುದನ್ನು ತಪ್ಪೊಪ್ಪಿಕೊಂಡಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸದರಿ ಸುಂದರ ಶೆಟ್ಟಿ ನಕಲಿ ದಾಖಲೆ ನೀಡಿ ಜಾಮೀನು ನೀಡಿವುದನ್ನೇ ಒಂದು ದಂಧೆಯಾಗಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳ ನ್ಯಾಯಾಲಯಗಳಲ್ಲಿ ಬಹಳಷ್ಟು ಪ್ರಕರಣಗಳಲ್ಲಿ ನಕಲಿ ಜಾಮೀನು ನೀಡಿರುವುದು ಕಂಡು ಬಂದಿದೆ.

ಮೂಡಿಗೆರೆ ಕೆ.ಎಂ. ರಸ್ತೆಯಲ್ಲಿ ಈ ಹಿಂದೆ ಸುಂದರ್ ವಿಡಿಯೋ ಥಿಯೇಟರ್ ಮತ್ತು ಸುಂದರ್ ಐಸ್ ಕ್ರೀಮ್ ವ್ಯಾಪಾರ ನಡೆಸುತ್ತಿದ್ದ ಸುಂದರ ಶೆಟ್ಟಿ ಕೆಲ ವರ್ಷಗಳ ಹಿಂದೆ ಆಸ್ತಿಯನ್ನು ಮಾರಾಟ ಮಾಡಿ ಮೂಡಿಗೆರೆಯಿಂದ ಬೇರೆಡೆ ತೆರಳಿದ್ದ.

ಈ ಹಿಂದೆ ಕೆ.ಎಸ್.ಆರ್.ಟಿ.ಸಿ. ಕಂಡಕ್ಟರ್ ಆಗಿದ್ದಾಗ ನಕಲಿ ಟಿಕೆಟ್ ಸೃಷ್ಟಿಸಿ ಇಲಾಖೆಗೆ ಲಕ್ಷಾಂತರ ವಂಚನೆ ಮಾಡಿದ ಪ್ರಕರಣದಲ್ಲಿ ಸೇವೆಯಿಂದ ಅಮಾನತಾಗಿದ್ದ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ