October 5, 2024

ಭಾರತ ತಂಡ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ನಿನ್ನೆ ರಾಜ್ ಕೋಟ್ ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ 91 ರನ್ ಗಳ ಅಂತರದಿಂದ ಶ್ರೀಲಂಕಾ ತಂಡವನ್ನು ಮಣಿಸಿ ಸರಣಿ ಜಯ ಗಳಿಸಿದೆ.

ಭಾರತ ತಂಡದ ಭರವಸೆಯ ದಾಂಡಿಗ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಆಟದ ಮುಂದೆ ಮಂಕಾದ ಶ್ರೀಲಂಕಾ ತಂಡ ಯಾವುದೇ ಪ್ರತಿರೋಧ ತೋರಲಾಗದೇ ಸುಲಭವಾಗಿ ಸೋಲೊಪ್ಪಿಕೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿದ್ದ ಶ್ರೀಲಂಕಾ ಮೂರನೇ ಪಂದ್ಯವನ್ನು ಸುಲಭವಾಗಿ ಬಿಟ್ಟುಕೊಟ್ಟಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತದ ತಂಡ ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಸೂರ್ಯಕುಮಾರ್ ಅವರ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 228 ರನ್ ಗಳ ಬೃಹತ್ ಮೊತ್ತ ಕೆಲೆಹಾಕಿತ್ತು. ಇದರಲ್ಲಿ ಸೂರ್ಯಕುಮಾರ್ ಯಾದವ್ ಅವರೇ ಅರ್ಧದಷ್ಟು ರನ್ ಗಳಿಸಿದರು. 51 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 7 ಬೌಂಡರಿಗಳ ಮೂಲಕ 112 ರನ್ ಗಳಿಸಿದ ಸೂರ್ಯಕುಮಾರ್ ಸ್ಟೇಡಿಯಂ ನಲ್ಲಿ ನೆರೆದಿದ್ದ ಭಾರತ ಕ್ರಿಕೆಟ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಉಳಿದಂತೆ ಆರಂಭಿಕ ಶುಭ್ ಮನ್ ಗಿಲ್ 46(36 ಎಸೆತ) , ರಾಹುಲ್ ತ್ರಿಪಾಠಿ 35(16 ಎಸೆತ), ಅಕ್ಷರ್ ಪಟೇಲ್  21(9 ಎಸೆತ) ಬಿರುಸಿನ ಆಟದ ಮೂಲಕ ಸೂರ್ಯಕುಮಾರ್ ಯಾದವ್ ಗೆ ಸಾಥ್ ನೀಡಿದರು.

229 ರನ್ ಗಳ ಗುರಿ ಬೆನ್ನಟ್ಟಿ ಬ್ಯಾಂಟಿಂಗ್ ಆರಂಭಿಸಿದ ಶ್ರೀಲಂಕಾ ಮೊದಲ ನಾಲ್ಕು ಓವರ್ ಗಳಲ್ಲಿ ಸರಾಸರಿ 10ರಂತೆ ವಿಕೆಟ್ ಕಳೆದುಕೊಳ್ಳದೇ ರನ್ ಗಳಿಸಿತ್ತು. ನಂತರ ಸತತ ವಿಕೇಟ್ ಕಳೆದುಕೊಂಡು 16.4 ಓವರ್ ಗಳಲ್ಲಿ 137 ರನ್ ಗಳಿಗೆ ಸರ್ವಪತನ ಕಂಡಿತು.

ಸೂರ್ಯಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರೆ, ಸರಣಿಯ ಮೂರು ಪಂದ್ಯಗಳಲ್ಲಿ ಆಲ್ರೌಂಡ್ ಆಟದಿಂದ ಮಿಂಚಿದ ಅಕ್ಷರ್ ಪಟೇಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಇದೇ ಜನವರಿ 10, 12 ಮತ್ತು 15 ರಂದು ನಡೆಯಲಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ