October 5, 2024

ಕಳೆದ ಮೂರು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಎಸೆದಿದ್ದ ಎಚ್.ಶರತ್ ಅವರ ಶವದ ಶೋಧವನ್ನು ಮುಂದುವರೆಸಿದ್ದ ಪೊಲೀಸರು ಗುರುವಾರವೂ ಶೋಧ ಕಾರ್ಯ ನಡೆಸಿ ಶವ ಸಿಗದೇ ಶೋಧ ಕಾರ್ಯಕ್ಕೆ ತೆರೆ ಎಳೆದು ಕರೆ ತಂದಿದ್ದ ಆರೋಪಿಗಳ ಜತೆ ಬೆಂಗಳೂರಿಗೆ ವಾಪಾಸಾಗಿದ್ದಾರೆ.

9 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಶರತ್ ಎಂಬ ಯುವಕನನ್ನು ಕೊಲೆ ಮಾಡಿ ಚಾರ್ಮಾಡಿಯಲ್ಲಿ ಎಸೆದಿದ್ದೇವೆ ಎಂದು ಹೇಳಿಕೆ ನೀಡಿದ್ದ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಶವ ಎಸೆದ ಜಾಗವನ್ನು ಗುರುತು ಹಚ್ಚದೇ ಇರುವುದೇ ಶವ ಶೋಧ ಕಾರ್ಯ ವಿಳಂಬವಾಗಲು ಕಾರಣವಾಯಿತು.

ಮೂರು ದಿನ ಕಬ್ಬನ್ ಪಾರ್ಕ್ ಮತ್ತು ಅಶೋಕನಗರ ಪೊಲೀಸರು ಮೂಡಿಗೆರೆಯ ಸಾಮಾಜಿಕ ಸಕ್ರೀಯ ಕಾರ್ಯಕರ್ತರು,ಸಮಾಜ ಸೇವಕ ಮೊಹಮ್ಮದ್ ಆರೀಪ್ ಹಾಗೂ ಸ್ಥಳೀಯರ ಸಹಕಾರದಿಂದ ಚಾರ್ಮಾಡಿ ಅಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ಮುಂದಿನ ಪ್ರಫಾತ,ಸೋಮನಕಾಡು ಹಾಗೂ ದಕ್ಷಿಣ ಕನ್ನಡ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹಲವೆಡೆ ಶೋಧ ಕಾರ್ಯಾಚರಣೆ ನಡೆಸಿ ಶವ ಸಿಗದೇ ಕರೆ ತಂದಿದ್ದ ಇಬ್ಬರು ಆರೋಪಿಗಳನ್ನು ವಾಪಾಸ್ ಕರೆದುಕೊಂಡು ಹೋಗಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಶೋಧ ಕಾರ್ಯದಲ್ಲಿ ಸ್ಥಳೀಯ ಎರಡು ಜಿಲ್ಲಾ ವ್ಯಾಪ್ತಿಯ ಪತ್ರಕರ್ತರು ಕೈಜೋಡಿಸಿದ್ದರು.ಅವರೆಲ್ಲರ ಸಹಕಾರವನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಎಸಿಪಿ ರಾಜೇಂದ್ರ ಹಾಗೂ ಅವರ ವಿಶೇಷ ಪೊಲೀಸ್ ತಂಡದವರು ಅಭಿನಂದಿಸಿದರು.

ಶವ ಶೋಧ ಕಾರ್ಯಾಚರಣೆಯಲ್ಲಿ ಕಬ್ಬನ್ ಪಾರ್ಕ್ ಎಸಿಪಿ ರಾಜೇಂದ್ರ,ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಚೈತನ್ಯ,ಅಶೋಕನಗರ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಜಿ.ಎ.ಅಶ್ವಿನಿ,ಸಹಾಯಕ ಇನ್ ಸ್ಪೆಕ್ಟರ್ ಹರಿಚಂದ್ರ, ಎಎಸೈಐ ರೇಣುಕಾ,ಪೊಲೀಸ್ ಸಿಬ್ಬಂದಿಗಳಾದ ನಂದೀಶ್,ವಸಂತ,ಜಾಕೀರ್,ಲೋಕೇಶ್,ಸೋಮು ಲಮಾಣಿ,ಪ್ರಮೋದ್ ಭಾಗವಹಿಸಿದ್ದರು.

 

ಯುವಕನ ಕೊಲೆ ಪ್ರಕರಣ : ಚಾರ್ಮಾಡಿ ಘಾಟ್ ನಲ್ಲಿ ಶವಕ್ಕಾಗಿ ಹುಡುಕಾಟ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ