October 5, 2024

ರಾಜ್ಯ ಸರ್ಕಾರ ಸಹಕಾರಿ ಸಂಘಗಳ ಮೂಲಕ ಮರುಜಾರಿಗೆ ತರುತ್ತಿರುವ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು  ಇದ್ದ ಗಡುವನ್ನು 31-1-2023ರ ವರೆಗೆ ವಿಸ್ತರಿಸಿದೆ. ಈ ಹಿಂದೆ 2022 ರ ಡಿಸೆಂಬರ್ 31 ಕೊನೆಯ ದಿನಾಂಕವಾಗಿತ್ತ್ತು.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸಹಕಾರ ಇಲಾಖೆ ಜಂಟಿ ಕಾರ್ಯದರ್ಶಿ ಎ.ಸಿ. ದಿವಾಕರ್ ಅವರು ಈ ಹಿಂದೆ ನಿಗದಿಪಡಿಸಿದ ಕಾಲಾವಧಿಯೊಳಗೆ ಎಲ್ಲಾ ಸದಸ್ಯರನ್ನು ನೋಂದಾಯಿಸಲು ಸಾಧ್ಯವಾಗಿಲ್ಲ. ನಿಗದಿತ 30 ಲಕ್ಷ ಸದಸ್ಯರ ನೋಂದಣಿ ಗುರಿ ಸಾಧಿಸಲು ನೋಂದಣಿ ದಿನಾಂಕವನ್ನು ವಿಸ್ತರಿಸುವುದು ಸಮಂಜಸವೆಂದು ತಿಳಿದು ಬಂದ ಕಾರಣ 2023ರ ಜನವರಿ 31ರ ವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಯಾವುದೇ ಸಹಕಾರಿ ಸಂಸ್ಥೆಗಳ ಸದಸ್ಯರಾದ ಮತ್ತು ಸಹಕಾರಿ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ಸಂಘಗಳ ಸದಸ್ಯರಾದವರ ಕುಟುಂಬದವರಿಗೆ ಈ ಯೋಜನೆ ಅನ್ವಯವಾಗುತ್ತದೆ.

ಗ್ರಾಮೀಣ ಪ್ರದೇಶದ 4 ಜನರ ಕುಟುಂಬಕ್ಕೆ ರೂ. 500-00 ಹಾಗೂ ನಗರ ಪ್ರದೇಶದ 4 ಜನರ ಕುಟುಂಬಕ್ಕೆ ರೂ. 1000-00 ಹಣ ಪಾವತಿಸಿ ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ಕುಟುಂಬದಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರಿದ್ದರೆ ಗ್ರಾಮೀಣ ಭಾಗದಲ್ಲಿ ತಲಾ ಒಬ್ಬರಿಗೆ ರೂ. 100 ಹಾಗೂ ನಗರ ಪ್ರದೇಶದಲ್ಲಿ ರೂ. 200 ಹೆಚ್ಚುವರಿ ಶುಲ್ಕ ಪಾವತಿಸಬೇಕು.

ಇದುವರೆಗೂ ಹೆಸರು ನೊಂದಾಯಿಸಿಕೊಳ್ಳದವರು ತಾವು ಸದಸ್ಯರಾಗಿರುವ ಸಹಕಾರ ಸಂಘಗಳಲ್ಲಿ 31-1-2023ರ ಒಳಗಾಗಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವಿದೆ.

ತುರ್ತು ಆರೋಗ್ಯ ಸಮಸ್ಯೆಯಾದಾಗ ಈ ಯೋಜನೆ ಬಹಳ ಅನುಕೂಲಕರವಾಗಿದ್ದು, ಕುಟುಂಬಕ್ಕೆ ರೂ. 5 ಲಕ್ಷದ ವರೆಗೆ ಆರೋಗ್ಯ ರಕ್ಷಾ ವಿಮೆ ಸೌಲಭ್ಯವಿರುತ್ತದೆ.

ಹೆಸರು ನೊಂದಾಯಿಸಲು ನಿಗದಿತ ನೋಂದಣಿ ಶುಲ್ಕದೊಂದಿಗೆ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್ ಪ್ರತಿ ಮತ್ತು 2 ಪಾಸ್ ಪೋರ್ಟ್ ಅಳತೆಯ ಪೋಟೋ ನೀಡಬೇಕಾಗುತ್ತದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ