October 5, 2024

ಜಾಗತಿಕ ಪುಟ್ಬಾಲ್ ಕ್ರೀಡೆಯ ಅತಿಶ್ರೇಷ್ಟ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದ ಪೀಲೆ (82 ವರ್ಷ) ವಿಧಿವಶರಾಗಿದ್ದಾರೆ. ಬ್ರಿಜಿಲ್ ತಂಡದ ಮಾಜಿ ಆಟಗಾರ ಪೀಲೆ ಕಾಲ್ಚೆಂಡಿನ ಮಾಂತ್ರಿಕ, ಕಪ್ಪು ವಜ್ರ(Black Pearl) ಎಂದೇ ಖ್ಯಾತನಾಮರಾಗಿದ್ದರು.

1940ರ ಅಕ್ಟೋಬರ್ 23ರಂದು ಬ್ರಿಜಿಲ್ ನ ಸಣ್ಣ ಹಳ್ಳಿಯೊಂದರ ಬಡಕುಟುಂಬದಲ್ಲಿ ಜನಿಸಿದ್ದ ಪೀಲೆ ತನ್ನ ಪ್ರತಿಭೆ, ಛಲ, ಪ್ರಯತ್ನದಿಂದ ವಿಶ್ವಶ್ರೇಷ್ಠ ಮಟ್ಟಕ್ಕೆ ಬೆಳೆದು ನಿಂತಿದ್ದರು.

ಇದುವರೆಗಿನ ಫುಟ್ಬಾಲ್ ಜಗತ್ತು ಮಾತ್ರವಲ್ಲ ಕ್ರೀಡಾ ಜಗತ್ತು ಕಂಡಿರುವ ಅತಿಮೌಲ್ಯಯುತ ಮತ್ತು ಸರ್ವಶ್ರೇಷ್ಠ ಆಟಗಾರ ಎಂಬ ಕೀರ್ತಿ ಇವರದ್ದಾಗಿತ್ತು. ಬಡತನದ ಕಾರಣದಿಂದ ಶೂ ಕೊಳ್ಳಲು ಹಣವಿಲ್ಲದೆ ಬರಿಗಾಲಲ್ಲಿ ಫುಟ್ಬಾಲ್ ಆಡಲು ಅಡಿಯಿಟ್ಟ ಪೀಲೆ ಮುಂದೆ ವಿಶ್ವವಿಜೇತರಾಗಿ ಹೊರಹೊಮ್ಮಿದ್ದು ಒಂದು ರೋಚಕ ಅಧ್ಯಾಯ.

ಅವರನ್ನು ಅಂತರಾಷ್ಟ್ರೀಯ ಒಲಂಪಿಕ್ ಸಂಸ್ಥೆಯ ಅಥ್ಲೇಟ್ ಆಪ್ ದಿ ಸೆಂಚೂರಿ (ಶತಮಾನದ ಕ್ರೀಡಾಪಟು) ಎಂದು ನಾಮಕರಣ ಮಾಡಿತ್ತು.

ತನ್ನ ವೃತ್ತಿ ಜೀವನದಲ್ಲಿ 1281 ಗೋಲುಗಳನ್ನು ಗಳಿಸಿದ ಪೀಲೇ ಜಗತ್ತಿನಲ್ಲಿ ಅತಿಹೆಚ್ಚು ಗೋಲು ಗಳಿಸಿದ ಫುಟ್ಬಾಲ್ ಪಟುವಾಗಿದ್ದಾರೆ. ಮೂರು ಬಾರಿ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ಜಗತ್ತಿನ ಏಕೈಕ ಆಟಗಾರರಾಗಿದ್ದರು.

1957 ರಿಂದ 1971 ರವರೆಗೆ ಬ್ರೆಜಿಲ್ ತಂಡದಲ್ಲಿ ಆಡಿದ ಪೀಲೆ 1958, 1962 ಮತ್ತು 1970 ರಲ್ಲಿ ಬ್ರೆಜಿಲ್ ಫಿಫಾ ವಿಶ್ವಕಪ್ ಗೆಲ್ಲಲು ಪ್ರಮುಖ ರುವಾರಿಯಾಗಿದ್ದರು.

ತನ್ನ ಕಾಲ್ಚೆಳಕದಿಂದ ಎದುರಾಳಿ ಆಟಗಾರರನ್ನು ತಬ್ಬಿಬ್ಬುಗೊಳಿಸುತ್ತಿದ್ದ ಪೀಲೆ ಮಾಂತ್ರಿಕ ಆಟದಿಂದ ಸಲೀಸಾಗಿ ಗೋಲು ಗಳಿಸುತ್ತಿದ್ದರು.

ಪೀಲೆ ಜೀವನ ಅನೇಕ ಸಿನಿಮಾಗಳಿಗೆ ಕತೆಯಾಗಿದ್ದು, ಪೀಲೆ ಪುಟ್ಬಾಲ್ ಜಗತ್ತಿನ ಜೀವಂತ ದಂತೆಕತೆಯಾಗಿದ್ದರು. ಅವರನ್ನು ಬ್ರೆಜಿಲ್ ನ ಪ್ರಾಂತ್ಯವೊಂದರ ಅಧ್ಯಕ್ಷರಾಗಿ ಮತ್ತು ಬ್ರೆಜಿಲ್ ನ ಕ್ರೀಡಾ ಸಚಿವರಾಗಿಯೂ ನಾಮಕರಣ ಮಾಡಲಾಗಿತ್ತು.

ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಪೀಲೆ ನಿಧನದಿಂದ ಆಧುನಿಕ ಕ್ರೀಡಾಲೋಕದ ಮಿನುಗುತಾರೆಯೊಂದು ಅಸ್ತಂಗತವಾದಂತಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ