October 5, 2024

ಚಿಕ್ಕಮಗಳೂರು ಜಿಲ್ಲೆ ಸಾರಗೋಡು ಮೀಸಲು ಅರಣ್ಯದ ವ್ಯಾಪ್ತಿಯ ಬೈರಿಗದ್ದೆ ಮತ್ತು ಮಂಡುಗುಳಿಹರದಲ್ಲಿ ವಾಸವಾಗಿರುವ ಸುಮಾರು 18 ಕುಟುಂಬಗಳಲ್ಲಿ 16 ಕುಟುಂಬಗಳು ಅರಣ್ಯದಿಂದ ಆಚೆ ಬರಲು ಅಹವಾಲು ಸಲ್ಲಿಸಿದ್ದಾರೆ. ಆದರೆ ಸರ್ಕಾರ ಇದುವರೆಗೂ ಅವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ದೊರಕಿಲ್ಲ

ಈ ಹಿನ್ನಲೆಯಲ್ಲಿ ಇತ್ತೀಚೆಗೆ ಇವರ ಕಷ್ಟವನ್ನು ಅರಿತು ಭದ್ರಾ ಇಕೋ ಕನ್ಸರ್ವೆಸನ್ ಫೌಂಡೇಷನ್ ಅಧ್ಯಕ್ಷ, ಮೂಡಿಗೆರೆ ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿ ಡಾ. ಶಿವಪ್ರಸಾದ್ ಅವರು ಜಿಲ್ಲಾಧಿಕಾರಿಗಳ ಬಳಿಗೆ ಸ್ಥಳೀಯರ ನಿಯೋಗವನ್ನು ಕರೆದೊಯ್ದು ಮನವಿ ಸಲ್ಲಿಸಿರುತ್ತಾರೆ. ಇವರ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸುವ ಭರವಸೆ ನೀಡಿರುತ್ತಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಡಾ. ಶಿವಪ್ರಸಾದ್  ; ಇಲ್ಲಿನ ಕುಟುಂಬಗಳು ಕಳೆದ 15 ವರ್ಷಗಳಿಂದ ತಮ್ಮನ್ನು ಸಾರಾಗೋಡು ಮೀಸಲು ಅರಣ್ಯ ಪ್ಯಾಕೇಜ್ ಅಡಿಯಲ್ಲಿ ಪುನರ್ವಸತಿ ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ಯಾರೂ ಸ್ಪಂದಿಸುತ್ತಿಲ್ಲ. 2017ರಲ್ಲಿ ಇಲ್ಲಿನ ಕುಟುಂಬಗಳಿಂದ ಅರಣ್ಯ ಇಲಾಖೆ ಬಾಂಡ್ ಪೇಪರ್ ನಲ್ಲಿ ಲಿಖಿತವಾಗಿ ಹೇಳಿಕೆ ಮತ್ತು ಸಹಿ ಪಡೆದಿದೆ. ಆದರೆ ಇದುವರೆಗೂ ಯಾವುದೇ ಪುನರ್ವಸತಿ ವ್ಯವಸ್ಥೆ ಮಾಡಿಲ್ಲ.

ಇದೀಗ ಸಂತ್ರಸ್ತರು ತೀವ್ರವಾದ ಸಮಸ್ಯೆಯಲ್ಲಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಕಾಡಾನೆ ಮತ್ತು ಕಾಡುಪ್ರಾಣಿಗಳ ಹಾವಳಿ ಮಿತಿಮೀರಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಮ್ಮನ್ನು ಇಂತಹ ನರಕಸದೃಷ ಜೀವನದಿಂದ ಬಿಡುಗಡೆ ಮಾಡಿ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಇಲ್ಲಿನ ನಿವಾಸಿಗಳ ಭೂಮಿಯನ್ನು ಅರಣ್ಯ ಇಲಾಖೆಗೆ ಪಡೆದು ಇವರಿಗೆ ಪರ್ಯಾಯ ಭೂಮಿ ಮತ್ತು ಪರಿಹಾರ ಮೊತ್ತವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಮೂಡಿಗೆರೆ ಎಸಿಎಫ್ ಡಾ. ರಾಜೇಶ್ ನಾಯ್ಕ್ ಮಾತನಾಡಿ ಮೀಸಲು ಅರಣ್ಯದ ಒಳಗೆ ವಾಸವಾಗಿರುವ ಒಟ್ಟು 18 ಕುಟುಂಬಗಳ ಪುನರ್ವಸತಿಗೆ ಸಂಬಂಧಿಸಿದ ಕಡತಗಳು ವಿಲೇವಾರಿ ಅಂತಿಮ ಹಂತದಲ್ಲಿದೆ. ಮೂಡಿಗೆರೆ ಅರಣ್ಯ ಇಲಾಖೆ ಕಛೇರಿಯಿಂದ ಕಡತಗಳ ಬಗ್ಗೆ ಕೇಳಿದ್ದ ವರದಿಯನ್ನು ಜಿಲ್ಲಾ ಅರಣ್ಯಾಧಿಕಾರಿಗಳ ಕಛೇರಿಗೆ ಕಳುಹಿಸಿಕೊಡಲಾಗಿದೆ. ಜಿ.ಹೊಸಳ್ಳಿ ಸಮೀಪ ಪರ್ಯಾಯ ಜಾಗವನ್ನು ಗುರುತಿಸಲಾಗಿದೆ. ಸದ್ಯದಲ್ಲಿಯೇ ಅರಣ್ಯದೊಳಗೆ ವಾಸಿಸುತ್ತಿರುವ ಕುಟುಂಬಗಳಿಗೆ ಪನರ್ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ