October 5, 2024

ನಿನ್ನೆ ರಾತ್ರಿಯಿಂದ ಮತ್ತೆ ಮೋಡಕವಿದ ವಾತಾವರಣ ಸೃಷ್ಟಿಯಾಗಿದೆ. ರಾತ್ರಿ ಕಾಫಿನಾಡಿನ ಅನೇಕ ಕಡೆ ತುಂತುರ ಮಳೆಯಾಗಿದೆ. ದಿಡೀರನೆ ಬದಲಾಗಿರುವ ವಾತಾರವರಣ ಕಂಡು ಕಾಫಿ ಬೆಳೆಗಾರರು ಆತಂತಕ್ಕೆ ಒಳಗಾಗಿದ್ದಾರೆ.

ಗಿಡದಲ್ಲಿ ಕಾಫಿ ಹಣ್ಣಾಗಿ ನಿಂತಿದ್ದು, ಕಾರ್ಮಿಕರ ಕೊರತೆಯಿಂದ ಸಕಾಲದಲ್ಲಿ ಕೊಯ್ಲು ಸಾಧ್ಯವಾಗುತ್ತಿಲ್ಲ. ಈಗ ಮಳೆ ಬಂದರೆ ಹಣ್ಣೆಲ್ಲ ನೆಲಕ್ಕೆ ಉದುರುತ್ತದೆ. ಈಗ ಕೊಯ್ದು ಕಣದಲ್ಲಿ ಒಣಹಾಕಿರುವ ಕಾಫಿಯೂ ಹಾಳಾಗುತ್ತದೆ. ಹಾಗಾಗಿ ಮತ್ತೆ ಮಳೆ ಬರುತ್ತದೆಯೇನೋ ಎಂದು ಬೆಳೆಗಾರರು ಚಿಂತೆಗೀಡಾಗಿದ್ದಾರೆ.

ಈಗಿನ ಹವಮಾನ ಮಾಹಿತಿ ಪ್ರಕಾರ ಕಾಫಿನಾಡಿನಲ್ಲಿ ಮುಂದಿನ ಮೂರ್ನಾಲ್ಕು ದಿನ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ದೊಡ್ಡ ಪ್ರಮಾಣದ ಮಳೆಯಾಗುವ ಸಾಧ್ಯತೆ ಕಡಿಮೆ. ಡಿಸೆಂಬರ್ 29 ರಿಂದ ಮೋಡಗಳು ಚದುರಿ ಒಣಹವೆ ಮುಂದುವರೆಯವ ಸಾಧ್ಯತೆ ಇದೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಮಳೆಬೀತಿ ಉಂಟುಮಾಡಿದೆ. ವಾಯುಭಾರ ಕುಸಿತವು ಶ್ರೀಲಂಕಾ ದಾಟಿ ಅರಬ್ಬಿ ಸಮುದ್ರದಲ್ಲಿ ಪಶ್ಚಿಮಕ್ಕೆ ಸಾಗುವ ಲಕ್ಷಣಗಳಿವೆ.  ಚೆನ್ನೈ,ತಮಿಳುನಾಡು,ಕಾಂಚಿಪುರಂ ,ನಾಗಪಟ್ಟಣಂ ಮತ್ತು ಮುಂತಾದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು ತಮಿಳುನಾಡು ಮತ್ತು ಪುದುಚೇರಿ ಮತ್ತು ಮತ್ತು ನೀಲಗಿರಿ ಮತ್ತು ಮುಂತಾದ ತಿರುಚಿರಾಪಳ್ಳಿ ಮತ್ತು ಮುಂತಾದ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯಾಗಲಿದೆ.

ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ. ರಾಜ್ಯದ ಮೈಸೂರು, ಚಾಮರಾಜನಗರ, ಬೆಂಗಳೂರು, ರಾಮನಗರ, ಕೋಲಾರ ಜಿಲ್ಲೆಗಳಲ್ಲಿ ಸಹ ಮೋಡದ ವಾತಾವರಣ ಇರಲಿದ್ದು ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ.
ಕೊಡಗು, ಹಾಸನ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.

ಡಿಸೆಂಬರ್ 28ರ ತನಕ ಅಲ್ಲಲ್ಲಿ ಮೋಡ ವಾತಾವರಣದ ಇರಲಿದ್ದು ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಯೂ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಡಿಸೆಂಬರ್ 29ರಿಂದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.. ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ