October 5, 2024

ಅಭಿವೃದ್ಧಿ ಹಾಗೂ ತಮ್ಮ ಹಕ್ಕು ಪಡೆಯಲು ಸಮಾಜದ ಎಲ್ಲಾ ಬಾಂದವರು ಸಂಘಟಿತರಾದರೆ ಮಾತ್ರ ಸಾಧ್ಯ. ಹಾಗಾಗಿ ಸಮಾಜದ ಬಾಂಧವರನ್ನು ಒಗ್ಗೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಂ ಸೇವಾ ಸಮಾಜದ ಮೂಡಿಗೆರೆ ತಾಲೂಕು ಅಧ್ಯಕ್ಷ ಸಿ.ವಿ.ಮಹೇಶ್ ಜನ್ನಾಪುರ ಹೇಳಿದರು.
ಅವರು ಭಾನುವಾರ ಮೂಡಿಗೆರೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಂ ಸೇವಾ ಸಮಾಜದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೋಷಿತರ ಧ್ವನಿಯಾಗಿ ಹೋರಾಟ ನಡೆಸಿದ ನಾರಾಯಣ ಗುರು ಅವರ ಪ್ರೇರೇಪಣೆ ಹಾಗೂ ಆದರ್ಶ ಜೀವನ ನಮ್ಮ ಸಂಘಟನೆ ಹಾಗೂ ಸಮಾಜಕ್ಕೆ ಶಕ್ತಿ ತುಂಬಿದೆ. ಈಗಾಗಲೇ ಸಂಘವು ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಉನ್ನತ ಹುದ್ದೆ ಅಲಂಕರಿಸುವ ಮೂಲಕ ಸಮಾಜ ಪ್ರಗತಿಗೆ ಶ್ರಮಿಸಬೇಕು. ಮುಂದಿನ ದಿನದಲ್ಲಿ ಸಂಘದಿಂದ ಸಮಾಜದ ಮಕ್ಕಳ ವಿದ್ಯಾಭ್ಯಾಸ ಹಾಗೂ ರೋಗಿಗಳಿಗೆ ಆರ್ಥಿಕ ನೆರವು ನೀಡುವ ಜತೆಗೆ ಸಮಾಜದ ಅಭಿವೃದ್ಧಿಗೆ ಪೂರಕವಾದ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಕಾರ್ಯದರ್ಶಿಯಿಂದ ವಾರ್ಷಿಕ ವರದಿ ಸಲ್ಲಿಸಲಾಯಿತು. ಎಲ್ಲಾ ಘಟಕದ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನೀಡಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಸಮಾಜದ ಉಪಾಧ್ಯಕ್ಷ ಬಿ.ವಿ.ಕುಮಾರ್, ಕಾರ್ಯದರ್ಶಿ ಪ್ರವಿಣ್, ಸಹ ಕಾರ್ಯದರ್ಶಿ ರಾಜೇಶ್, ಪದಾಧಿಕಾರಿಗಳಾದ ಪಿ.ಆರ್.ಸುಧಾಕರ್, ಜಗನ್‍ಮೋಹನ್, ಸುಲೋಚನಾ, ವಿವಿಧ ಘಟಕದ ಅಧ್ಯಕ್ಷರಾದ ಉನ್ನಿಕೃಷ್ಣನ್, ಪ್ರಕಾಶ್ ಬಿಳಗುಳ, ಎನ್.ಪಿ.ರಾಜು, ಅನೀಸ್, ಆನಂದ್, ರಾಮಚಂದ್ರ, ಅಯ್ಯಪ್ಪನ್ ಕಳಸ, ನಳರಾಜ್, ಕುಮಾರ್ ಗೋಣಿಬೀಡು ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ