October 5, 2024

5 G ಮೊಬೈಲ್ ಟವರ್ ಹೆಸರಿನಲ್ಲಿ ಮಹಾವಂಚನೆಯ ಜಾಲ ಕಾರ್ಯನಿರ್ವಹಿಸುತ್ತಿದ್ದು, ಯಾಮಾರಿದರೆ ಪಂಗನಾಮ ಗ್ಯಾರಂಟಿ.

ಇಂತಹುದೇ ಒಂದು ಮೋಸದ ಜಾಲಕ್ಕೆ ಮೂಡಿಗೆರೆಯ ಒಬ್ಬರ ವ್ಯಕ್ತಿ ಹಣವನ್ನು ಕಳೆದುಕೊಂಡು ಪರಿತಪಿಸುವಂತಾಗಿದೆ.

ತಾಲ್ಲೂಕಿನ ಕಾಫಿ ಬೆಳೆಗಾರರೊಬ್ಬರು ತಮ್ಮ ಮೊಬೈಲ್‍ಗೆ ಬಂದ ಸಂದೇಶವನ್ನು ನೋಡಿ ಆಸಕ್ತಿ ತೆಳೆದು ಮುಂದುವರಿದು ಹಣ ಕಳೆದುಕೊಂಡಿದ್ದಾರೆ.

ತಮ್ಮ ಜಾಗದಲ್ಲಿ ಮೊಬೈಲ್ ಟವರ್ ಹಾಕುವವರು ಯಾರಾದರು ಸಿಕ್ಕಿದರೆ ಕೊಡಬಹುದಿತ್ತು ಎಂಬ ಆಲೋಚನೆಯಲ್ಲಿದ್ದ ಅವರಿಗೆ ತಮ್ಮ ಮೊಬೈಲಿಗೆ ಬಂದ ಸಂದೇಶ ಮನಸ್ಸನ್ನು ಸೆಳೆದಿದೆ. ಬಯಸಿದ ಭಾಗ್ಯ ಮನೆಯ ಬಾಗಿಲಿಗೆ ಹುಡುಕಿಕೊಂಡು ಬಂದಿದೆ ಎಂದು ಭಾವಿಸಿದ ಅವರು ಆ ಸಂದೇಶ ಕಳುಹಿಸಿದವರ ಜೊತೆ ವ್ಯವಹಾರಕ್ಕೆ ಮುಂದಾಗಿದ್ದಾರೆ. ಕೊನೆಗೆ 54 ಸಾವಿರ ಹಣವನ್ನು ಕಳೆದುಕೊಂಡಿದ್ದಾರೆ.

ಈ ಬಗ್ಗೆ ಮೂಡಿಗೆರೆ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದಾರೆ. ಅವರಿಗೆ 8860576850 ಮತ್ತು 8447705945 ಈ ಸಂಖ್ಯೆಗಳಿಂದ ಸಂದೇಶ ಮತ್ತು ಕರೆಮಾಡಿ ಮೋಸಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹೀಗೆಯೇ ನಿಮಗೆ ಜಿಯೋ ಏಜೆನ್ಸಿ ಕೊಡುತ್ತೇವೆ ಎಂದು ನಂಬಿಸಿ ಮೂಡಿಗೆರೆಯ ವ್ಯಕ್ತಿಯೊಬ್ಬರಿಂದ ಐದು ಲಕ್ಷ ಹಣವನ್ನು ಅಡ್ವಾನ್ಸ್ ಎಂದು ಅಕೌಂಟಿಗೆ ಹಾಕಿಸಿಕೊಂಡು ಮೋಸ ಮಾಡಿದ್ದ ಪ್ರಕರಣ ಕಳೆದ ವರ್ಷ ನಡೆದಿತ್ತು.

ಹೌದು, 5ಜಿ ಟವರ್ ಅಳವಡಿಸಿ ಲಕ್ಷಾಂತರ ಅಡ್ವಾನ್ಸ್ ಮತ್ತು ತಿಂಗಳು ತಿಂಗಳು ಬಾಡಿಗೆ ಪಡೆಯಿರಿ ಎಂಬ ಸಂದೇಶಗಳು ಬಹುತೇಕರ ಮೊಬೈಲ್‍ಗಳಿಗೆ ಬಂದಿರಬಹುದು.

ನಿಮ್ಮ ಜಮೀನಿನಲ್ಲಿ ಜಾಗ ನೀಡಿದರೆ ಅಲ್ಲಿ 5ಜಿ ಟವರ್ ಅಳವಡಿಸುತ್ತೇವೆ. ಅದಕ್ಕಾಗಿ ನಿಮಗೆ ಅಡ್ವಾನ್ಸ್ ಮತ್ತು ಬಾಡಿಗೆ ಕೊಡುತ್ತೇವೆ ಎಂದು ಬರುವ ಸಂದೇಶಗಳನ್ನು ನಂಬಿ ಮುಂದುವರಿದರೆ ಕತೆ ಮುಗಿದಂತೆ. ಇಂತಹ ಸಂದೇಶಗಳನ್ನು ನಿಜವೆಂದು ನಂಬಿ ಅನೇಕ ಮಂದಿ ಈಗಾಗಲೇ ಮೋಸ ಹೋಗಿದ್ದಾರೆ.

ಅನೇಕ ಜನ ಕುಳಿತಲ್ಲಿಗೆ ಹಣ ಬರುತ್ತದೆ ಎಂಬ ಆಸೆಯಿಂದ ಅಂತಹ ಸಂದೇಶಗಳನ್ನು ಹಾಕಿರುವವರ ಜೊತೆ ವ್ಯವಹಾರಕ್ಕೆ ಮುಂದಾಗುತ್ತಾರೆ. ಆಗ ಅವರು ತಮ್ಮ ಅಸಲಿ ಆಟ ಶುರುಮಾಡುತ್ತಾರೆ.

ಆರಂಭದಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮುಂತಾದ ನಮ್ಮ ದಾಖಲೆಗಳನ್ನು ಕೇಳುತ್ತಾರೆ. ನಂತರ ನಮ್ಮ ನಿಮ್ಮ ನಡುವೆ ಅಗ್ರಿಮೆಂಟ್ ಆಗಬೇಕು ಎಂದು ಕೊರಿಯರ್ ಮೂಲಕ ದಾಖಲೆ ಕಳಿಸಿ ಸಹಿ ಪಡೆದುಕೊಳ್ಳುತ್ತಾರೆ. ಎಲ್ಲವನ್ನು ನಂಬಿಕೆ ಬರುವ ರೀತಿಯಲ್ಲಿಯೇ ಮಾತನಾಡುತ್ತಾರೆ.

ನಂತರ ರಿಜಿಷ್ಟ್ರೇಷನ್ ಶುಲ್ಕ, ಠೇವಣಿ, ಅಡ್ವಾನ್ಸ್ ಅದು..ಇದು ಎಂದು ಹಣವನ್ನು ಕೇಳಲು ತೊಡಗುತ್ತಾರೆ. ಅವರ ಮಾತಿಗೆ ಮರುಳಾದವರಿಂದ ಸಾಕಷ್ಟು ಹಣವನ್ನು ಅವರ ಖಾತೆಗೆ ಜಮಾ ಮಾಡಿಸಿಕೊಂಡಾದ ಮೇಲೆ ಪೋನ್ ಸ್ವಿಚ್ ಆಫ್ ಅಥವಾ ನಾಟ್‍ರೀಚಬಲ್ ಎಂದು ಬರಲು ಪ್ರಾರಂಭಿಸುತ್ತದೆ. ಅಲ್ಲಿಗೆ ಹಣಕಳೆದುಕೊಂಡವರು ಕಣ್ಣುಕಣ್ಣು ಬಿಡುವುದೊಂದೇ ದಾರಿ.

ಯಾವುದೋ ಮೂಲೆಯಲ್ಲಿ ಕುಳಿತು ಇಂತಹ ಮೋಸದ ಜಾಲವನ್ನು ಹೆಡೆದು ಜನರನ್ನು ಮರುಳು ಮಾಡಿ ಮೋಸ ಮಾಡುವ ದಂಧೆಗೆ ಅನೇಕ ಜನ ಬಲಿಯಾಗುತ್ತಿದ್ದಾರೆ. ಅಂತವರು ಅಷ್ಟು ಸುಲಭದಲ್ಲಿ ಸಿಕ್ಕಿಹಾಕಿಕೊಳ್ಳುವುದು ಇಲ್ಲ. ಪೊಲೀಸ್ ಕೇಸು ನೀಡಿದರು ಹೆಚ್ಚೇನು ಪ್ರಯೋಜನ ಆಗಲ್ಲ.

ಇಂತವರ ಮೋಸಕ್ಕೆ ಬಲಿಯಾಗದಂತೆ ಎಚ್ಚರಿಕೆಯಿಂದ ಇರುವುದು ಒಂದೇ ಬುದ್ದಿವಂತರ ಲಕ್ಷಣ. ಮೊಬೈಲ್‍ಗೆ ಬರುವ ಇಂತಹ ಯಾವ ಸಂದೇಶಗಳು ನಿಜವಾಗಿರುವುದಿಲ್ಲ. ಎಲ್ಲವೂ ಮೋಸದ ಜಾಲವಾಗಿರುತ್ತವೆ. ಆದ್ದರಿಂದ ಜನರು ಆದಷ್ಟು ಎಚ್ಚರಿಕೆಯಿಂದ ಇರಬೇಕು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ