October 5, 2024

ಬೆಂಗಳೂರಿನಲ್ಲಿ ನಡೆದ ಅಂಧರ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಭಾರತದ ತಂಡ ಮೊದಲು ಬ್ಯಾಟ್ ಬೀಸಿ ನಿಗದಿತ 20 ಓವರ್ ಗಳಲ್ಲಿ 277 ರನ್ ಕಲೆಹಾಕಿತ್ತು. ನಾಯಕ ಸುನಿಲ್ ರಮೇಶ್ ಅಜೇಯ 144 ಮತ್ತು ಅಜಯ್ ಕುಮಾರ್ ರೆಡ್ಡಿ ಅಜೇಯ 100 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಉತ್ತರವಾಗಿ ಬಾಂಗ್ಲಾ ತಂಡ ನಿಗದಿತ 20 ಓವರ್ ಗಳಲ್ಲಿ 157 ರನ್ ಗಳಿಸಲಷ್ಟೇ ಯಶಸ್ವಿಯಾಯಿತು.

ಪಂದ್ಯಾವಳಿಯುದ್ದಕ್ಕೂ ಯಾವ ಪಂದ್ಯವನ್ನು ಸೋಲದೇ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಭಾರತ ಅಂಧರ ಕ್ರಿಕೆಟ್ ತಂಡ ಇದುವರೆಗೆ ನಡೆದಿರುವ      ಎಲ್ಲಾ ಮೂರು ಟಿ-20 ವಿಶ್ವಕಪ್ ಗಳಲ್ಲಿಯೂ ಚಾಂಪಿಯನ್ ಆಗಿ ಹೊರಹೊಮ್ಮಿ ಹ್ಯಾಟ್ರಿಕ್ ಜಯದ ಸಾಧನೆ ಮಾಡಿದೆ.

ಪಂದ್ಯಾವಳಿಯಲ್ಲಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾ, ಶ್ರೀಲಂಕಾ ತಂಡಗಳು ಭಾಗವಹಿಸಿದ್ದವು.

ಈ ಹಿಂದೆ 2012 ರಲ್ಲಿ ಮತ್ತು 2017 ರಲ್ಲಿ ಟಿ-20 ಅಂಧರ ವಿಶ್ವಕಪ್ ಪಂದ್ಯಾವಳಿಗಳು ನಡೆದಿದ್ದವು.

ಅಂಧರ ಕ್ರಿಕೆಟ್ ತಂಡದಲ್ಲಿ ಒಟ್ಟು 11 ಮಂದಿಯಲ್ಲಿ 4 ಆಟಗಾರರು ಸಂಪೂರ್ಣ ಅಂಧರು, 3 ಆಟಗಾರರು ಭಾಗಶಃ ಅಂಧರು ಮತ್ತು 4 ಆಟಗಾರರು ಭಾಗಶಃ ದೃಷ್ಟಿ ಇರುವವರು ಇರುತ್ತಾರೆ.

ಭಾರತ ತಂಡ ವಿಶ್ವಚಾಂಪಿಯನ್ ಆಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ