October 5, 2024

ಇದೇ ಮೊಟ್ಟ ಮೊದಲ ಬಾರಿಗೆ ಈಶ ಕ್ಲಾಸಿಕಲ್ ಹಠಯೋಗ ತರಬೇತಿ ಶಿಬಿರ ಮೂಡಿಗೆರೆಯಲ್ಲಿ  ಏರ್ಪಡಿಸಲಾಗಿದೆ. ಮೂಡಿಗೆರೆ ರೈತ ಭವನದಲ್ಲಿ ಡಿ.26ರಿಂದ 29 ರವರೆಗೆ ನಾಲ್ಕು ದಿನಗಳ ಕಾಲ ಬೆಳಗ್ಗೆ 6:15 ರಿಂದ 8:30 ಗಂಟೆವರೆಗೆ ಶಿಬಿರದ ಸಮಯ.

ಈಶ ಕ್ಲಾಸಿಕಲ್ ಹಠಯೋಗ  ಶಿಬಿರವನ್ನು ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ಈಶ ಕ್ಲಾಸಿಕಲ್ ಹಠಯೋಗ ಕಾರ್ಯಕ್ರಮದ ಸಂಯೋಜಕ ಶೇಖರ್  ಕುಮಾರ್ ಸಾಹು ಕೋರಿದ್ದಾರೆ.

ಸಾವಿರಾರು ವರ್ಷಗಳಿಂದ ಒಬ್ಬ ಯೋಗಿಯಿಂದ ಇನ್ನೊಬ್ಬರಿಗೆ, ಕಲಬೆರಿಕೆಯಿಲ್ಲದೆ ವರ್ಗಾಯಿಸಲ್ಪಟ್ಟದ್ದೇ ಕ್ಲಾಸಿಕಲ್ ಹಠಯೋಗ . ಉನ್ನತ ತರಬೇತಿ ಪಡೆದ ಶಿಕ್ಷಕರಿಂದ ಕ್ಲಾಸಿಕಲ್ ಹಠಯೋಗವನ್ನು ಆಳವಾಗಿ ಕಲಿಯಲು ಇದೊಂದು ಸುವರ್ಣಾವಕಾಶವಾಗಿದೆ. ಕಾರ್ಯಕ್ರಮ ಹಠಯೋಗದ ವ್ಯಾಪಕ ಪರಿಶೋಧನೆಯಾಗಿದ್ದು, ಪ್ರಪಂಚದಲ್ಲಿ ಇಂದು ಹೆಚ್ಚಾಗಿ ಇಲ್ಲದಿರುವ ಈ ಪ್ರಾಚೀನ ವಿಜ್ಞಾನದ ವಿವಿಧ ಆಯಾಮಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದರು.

ಸದ್ಗುರುಗಳು ಹೇಳುವಂತೆ, ಇವು ಪರಿವರ್ತನೆಯ ಸಾಧನಗಳು. ಪ್ರತಿಯೊಬ್ಬ ಮನುಷ್ಯನು ತನ್ನ ಪೂರ್ಣ ಸಾಮಥ್ರ್ಯವನ್ನು ಇದೇ ಜೀವಿತಾವಧಿಯಲ್ಲಿ ತಲುಪಬೇಕು. ಈ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯ ಒಂದು ಹನಿಯನ್ನಾದರೂ ಅನುಭವಿಸಲೇಬೇಕೆಂಬುದು ಸದ್ಗುರುಗಳ ಬೃಹದಾಸೆಯನ್ನು ಈಡೇರಿಸುವ ಪ್ರಯತ್ನ ಮಾಡಲಾಗುತ್ತಿದೆ.
ಜನರ ಜೀವನವನ್ನು ಸುಂದರವಾಗಿ ಪರಿವರ್ತಿಸಬಲ್ಲ ಪ್ರಬಲ ಅಭ್ಯಾಸಗಳನ್ನು ಕಲಿಯುವ ಈ ಸದಾವಕಾಶವನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು. 14 ವರ್ಷ ಮತ್ತು ಮೇಲ್ಪಟ್ಟ ವಯಸ್ಕರು ಈ ಯೋಗಾಭ್ಯಾಸಗಳನ್ನು ಕಲಿಯಬಹುದು.

ಸಭಾಂಗಣದ ಸ್ಥಳಾವಕಾಶ ಸೀಮಿತವಾಗಿರುವುದರಿಂದ ನೊಂದಣಿಗಳ ಸಂಖ್ಯೆಯೂ ಸೀಮಿತವಾಗಿದೆ. ಹಾಗಾಗಿ ಮುಂಚಿತವಾಗಿ ನೊಂದಾಯಿಸಿಕೊಳ್ಳಲು ಕೂಡಲೇ 9886181009. ಈ ವಾಟ್ಸಾಪ್ ಸಂಖ್ಯೆಗೆ ಸಂದೇಶ ಹಾಗೂ ಕರೆ ಮಾಡಬೇಕು ಎಂದು ಮನವಿ ಮಾಡಿದರು.
ನೋಂದಣಿ ಶುಲ್ಕ ನಾಮಮಾತ್ರವಾದ 500/- ರೂಪಾಯಿಗಳು.

ಸುದ್ದಿಗೋಷ್ಠಿಯಲ್ಲಿ ಅರ್ಚನಾ, ಸುಪ್ರಿತ್ ಕಾರ್ ಬೈಲ್, , ವಿಕಾಸ್ ಕೊಲ್ಲಿಬೈಲ್ ಉಪಸ್ಥಿತರಿದ್ದರು.

ನಾಳೆ ಡಿಸೆಂಬರ್ 26 ರ ಬೆಳಿಗ್ಗೆ 6.15 ರಿಂದ ಶಿಬಿರ ಪ್ರಾರಂಭವಾಗಲಿದ್ದು. ಆಸಕ್ತರು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬಹುದಾಗಿರುತ್ತದೆ.

‘ನೀವು ತಯಾರಾಗಿದ್ದರೆ, ನಿಮ್ಮ ಜೀವನದ ಪ್ರತಿ ಕ್ಷಣವೂ ಒಂದು ಅದ್ಭುತ ಅನುಭವವಾಗಬಲ್ಲದು. ಉಚ್ಛ್ವಾಸ ನಿಶ್ವಾಸಗಳೇ ತೀವ್ರವಾದ ಪ್ರೇಮಪ್ರಣಯವಾಗಬಲ್ಲದು’
~ ಸದ್ಗುರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ