October 5, 2024

ಜೂನಿಯರ್ ಛೇಂಬರ್ ಇಂಟರ್‌ ನ್ಯಾಷನಲ್(ಜೇಸಿಐ) ಮೂಡಿಗೆರೆ ಘಟಕವು 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸವಿನೆನಪಿನಲ್ಲಿ ಸುವರ್ಣ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿತು.

ನಿನ್ನೆ ಮೂಡಿಗೆರೆ ಪಟ್ಟಣದಲ್ಲಿ ಭವ್ಯ ಮೆರವಣಿಗೆ ಸಾಗಿ ಜೇಸಿ ಭವನದಲ್ಲಿ ಸುವರ್ಣ ಮಹೋತ್ಸವ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಮಾರಂಭವನ್ನು ಉದ್ಘಾಟಿಸಿದ ಹೊರನಾಡು ಶ್ರೀ ಕ್ಷೇತ್ರದ ಧರ್ಮಕರ್ತರವಾದ ಶ್ರೀ ಜಿ. ಭೀಮೇಶ್ವರ ಜೋಷಿಯವರು ಮಾತನಾಡಿ ;  ಇವತ್ತಿನ ಕಾಲಘಟ್ಟದಲ್ಲಿ ಎಲ್ಲಾ ಕ್ಷೇತ್ರಗಳು ಕಲುಷಿತವಾಗಿವೆ. ಅದನ್ನು ಶುದ್ಧೀಕರಣಗೊಳಿಸಲು ವ್ಯಕ್ತಿ ವಿಕಸನಗೊಳ್ಳುವ  ಅನಿವಾರ್ಯತೆ ಇದೆ. ಬದುಕು ಕ್ಷಣಿಕ ಮತ್ತು ಸಂಕೀರ್ಣ.

ನಮ್ಮ ದೇಶ, ಸಮಾಜ, ಸಂಸಾರ ಹಾಗೂ ವ್ಯಕ್ತಿಗೆ ಶಾಂತಿ ಸಿಗಬೇಕೆಂದರೆ ಮಾನವ ಜನನದಿಂದ ಮರಣದವರೆಗೆ ಸದಾ ವ್ಯಕ್ತಿತ್ವ ಪರಿವರ್ತನೆಯಾಗಬೇಕು. ವ್ಯಕ್ತಿ ಬದಲಾವಣೆಯಿಂದ ಸಮಾಜದ ಬದಲಾಗುತ್ತದೆ. ಶಾಂತಿ, ನೆಮ್ಮದಿ, ಸೌಹಾರ್ಧತೆ ಕಾಣಲು ಸಾಧ್ಯವಾಗುತ್ತದೆ. ಜೇಸಿ ಸಂಸ್ಥೆಯಿಂದ ಈ ಕಾರ್ಯ ನಿರಂತರ ನಡೆಯುತ್ತಿದೆ ಎಂದರು.

ಸುವರ್ಣ ಮಹೋತ್ಸವ ಆಚರಿಸಿಕೊಂಡಿರುವ ಮೂಡಿಗೆರೆ ಜೇಸಿ ಸಂಸ್ಥೆ ಶತಮಾನೋತ್ಸವ ಆಚರಿಸಿ ಮುನ್ನಡೆಯುವ ಭಾಗ್ಯ ಕಾಣಲಿ ಎಂದು ಹಾರೈಸಿದರು.

ಸ್ಥಾಪಕ ವಲಯಾಧ್ಯಕ್ಷ ಎಂ.ಆರ್.ಜಯೇಶ್ ಮಾತನಾಡಿ,  ಮೂಡಿಗೆರೆಯಲ್ಲಿ 1973ರಲ್ಲಿ ಎನ್.ಎಲ್.ಸುಂದರೇಶ್ವರ ಅವರು ಜೇಸಿ ಸಂಸ್ಥೆ ಪ್ರಾರಂಭಿಸಿದರು. ಆ ನಂತರದ ವರ್ಷಗಳಲ್ಲಿ ಸಂಸ್ಥೆ ಎಲ್ಲೂ ಹಳಿ ತಪ್ಪದಂತೆ ಮುಂದುವರೆಸಿಕೊಂಡು ಬಂದಿರುವ ಎಲ್ಲಾ ಅಧ್ಯಕ್ಷರ ಶ್ರಮ ಸ್ಮರಿಸಿಕೊಳ್ಳಬೇಕಿದೆ. ಮೂಡಿಗೆರೆ ಜೇಸಿ ಸಂಸ್ಥೆ ಕಟ್ಟಡ ದೇಶದಲ್ಲೇ ಮೊದಲು ಸ್ಥಾಪಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಗೆ ಅಧಿಕ ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ಜನಪರ ಕಾರ್ಯಕ್ರಮ ರೂಪಿಸಿ, ಸಮಾಜ ಪರಿವರ್ತನೆಗೆ ಶ್ರಮಿಸಬೇಕೆಂದು ಹೇಳಿದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಜೇಸಿ ಭವನದ ಎದುರು 50 ವರ್ಷದ ಸುವರ್ಣ ಸಂಭ್ರಮದ ಶಿಲಾಫಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಜಿಲ್ಲಾ ಸರ್ಜನ್ ಡಾ.ಸಿ. ಮೋಹನ್ ಕುಮಾರ್ ಮತ್ತು  ಜೇಸಿಐ ಮೂಡಿಗೆರೆ ಎಲ್ಲಾ ಪೂರ್ವಾಧ್ಯಕ್ಷರುಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷೆ ವಿದ್ಯಾರಾಜು ವಹಿಸಿದ್ದರು. ಜೇಸಿಐ ಸಂಸ್ಥಾಪಕ ಅಧ್ಯಕ್ಷ ಎನ್.ಎಲ್.ಸುಂದರೇಶ್ವರ್, ರಾಷ್ಟ್ರೀಯ ಉಪಾಧ್ಯಕ್ಷ ವಿಕಾಸ್ ಗೂಗ್ಲಿಯಾ,  ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಸುಪ್ರಿತ್ ಕಾರ್ ಬೈಲ್, ಮಹಿಳಾ ಜೇಸಿ ವಿಭಾಗದ ಕಾರ್ಯದರ್ಶಿ ಸಂದ್ಯಾಸುದೀಪ್, ಜೂನಿಯರ್ ಜೇಸಿ ಅಧ್ಯಕ್ಷೆ ಸಾಕ್ಷಿರಾಜು, ಕಟ್ಟಡ ಸಮಿತಿ ಅಧ್ಯಕ್ಷ ಎನ್.ಎಲ್. ಪುಣ್ಯಮೂರ್ತಿ ಮತ್ತಿತರರಿದ್ದರು.

****************************

ಸಂಜೆ ನಡೆದ ಜೇಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಜೇಸಿ ಸವಿತಾ ರವಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ, ವಲಯಾಧ್ಯಕ್ಷೆ ಜೇಸಿ ಯಶಸ್ವಿನಿ, ಪೂರ್ವ ವಲಯಾಧ್ಯಕ್ಷ ನವೀನ್ ಲಾಯ್ಡ್ ಮಿಸ್ಕಿತ್, ವಲಯ ಉಪಾಧ್ಯಕ್ಷ ಪ್ರಶಾಂತ್ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ