October 5, 2024

ಬಾಂಗ್ಲಾವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ದಾಖಲಿಸಿದೆ. 227ರನ್ ಗಳ ಅಂತರದಿಂದ ನಿರಾಯಾಸ ಗೆಲುವು ಪಡೆದಿದೆ.

ಮೊದಲ ಎರಡು ಪಂದ್ಯಗಳನ್ನು ಕೂದಲೆಳೆಯ ಅಂತರದಿಂದ ಸೋತಿದ್ದ ಭಾರತ ಮೂರನೇ ಪಂದ್ಯದಲ್ಲಿ ಮುಯ್ಯಿ ತೀರಿಸಿಕೊಂಡಿದೆ.

ಟಾಸ್ ಗೆದ್ದ ಬಾಂಗ್ಲಾ ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ನಿಗದಿತ 50 ಓವರ್ ಗಳಲ್ಲಿ 409ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಆರಂಭಿಕ ಯುವ ಬಾಟ್ಸ್ ಮನ್ ಇಶನ್ ಕಿಶನ್ ದಾಖಲೆಯ ದ್ವಿಶತಕ ಬಾರಿಸಿದರೆ, ವಿರಾಟ್ ಕೊಯ್ಲಿ ಬಿರುಸಿನ ಶತಕ 113 ರನ್(91 ಎಸೆತ) ದಾಖಲಿಸಿ ಬೃಹತ್ ಮೊತ್ತವನ್ನು ಕಲೆಹಾಕಲು ನೆರವಾದರು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ವಿಫಲವಾದ ಬಾಂಗ್ಲಾ 34 ಓವರ್ ಗಳಲ್ಲಿ ಕೇವಲ 182 ರನ್ ಗಳಗೆ ಆಲೌಟ್ ಆಗಿತ್ತು.

ಕ್ರಿಸ್ ಗೇಲ್ ದಾಖಲೆ ಪುಡಿಗಟ್ಟಿದ ಇಶನ್ ಕಿಶನ್ 

ಭಾರತದ ಆರಂಭಿಕ ದಾಂಡಿಗ ಇಶನ್ ಕಿಶನ್ ಕೇವಲ 131 ಎಸೆತಗಳಲ್ಲಿ 210 ರನ್ ಕಲೆಹಾಕಿದರು. ಇದರಲ್ಲಿ 24 ಬೌಂಡರಿ ಮತ್ತು 10 ಸಿಕ್ಸರ್ ಒಳಗೊಂಡಿದ್ದವು.

ಏಕದಿನ ಕ್ರಿಕೆಟ್ ನಲ್ಲಿ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ವೇಗದ ದ್ವಿಶತಕದ ದಾಖಲೆಯನ್ನು ಇಶನ್ ಪುಡಿಗಟ್ಟಿದರು. ಕೇವಲ 126 ಎಸೆತಗಳಲ್ಲಿ 200ರ ಗಡಿಮುಟ್ಟಿದ ಇಶನ್ 2015ರಲ್ಲಿ ವೆಸ್ಟ್ ಇಂಡಿಸ್ ನ ಗ್ರಿಸ್ ಗೇಲ್ ಜಿಂಬಾಬ್ವೆ ಎದುರು 138 ಎಸೆತಗಳಲ್ಲಿ ದ್ವಿಶತಕ ಬಾರಿಸಿ ನಿರ್ಮಿಸಿದ್ದ ವೇಗದ ದ್ವಿಶತಕ ದಾಖಲೆಯನ್ನು ಅಳಿಸಿಹಾಕಿದರು.

ಶತಕ ಪೂರೈಸಲು 85 ಎಸೆಗಳನ್ನು ತೆಗೆದುಕೊಂಡಿದ್ದ ಇಶನ್ ಮುಂದಿನ ನೂರು ರನ್‍ಗಳನ್ನು ಕೇವಲ 41 ಎಸೆತಗಳಲ್ಲಿ ಪೂರೈಸಿದರು.

ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ನಂತರ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ದಾಖಲಿಸಿದ ಭಾರತದ 4ನೇ ಹಾಗೂ ವಿಶ್ವದ 7ನೇ ಆಟಗಾರ ಎನಿಸಿದರು. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ನಲ್ಲಿ ಮೂರು ಬಾರಿ ದ್ವಿಶತಕ ಬಾರಿಸಿದ ಅಪರೂಪದ ದಾಖಲೆ ಬರೆದಿದ್ದಾರೆ.

ಭಾರತದ ನಾಲ್ವರನ್ನು ಹೊರತುಪಡಿಸಿ ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್, ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಮತ್ತು ಪಾಕಿಸ್ತಾನದ ಫಖರ್ ಜಮಾನ್ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಾಧನೆ ಮಾಡಿದವರಾಗಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ