October 5, 2024

ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಿಂದ ಪ್ರಶಸ್ತಿಯ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಬಲಿಷ್ಠ ಬ್ರೆಜಿಲ್ ಹೊರಬಿದ್ದಿದೆ. ನಿನ್ನೆ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ಕ್ರೊವೇಷಿಯಾ ತಂಡದೆದುರು ಸೋತು ತೀವ್ರ ನಿರಾಸೆ ಅನುಭವಿಸಿದೆ.

ಕ್ವಾರ್ಟರ್ ಫೈನಲ್ ರೋಚಕ ಹಣಾಹಣಿಯಲ್ಲಿ ಪಂದ್ಯದ ಫಲಿತಾಂಶವನ್ನು ನಿರ್ಣಯಿಸಲು ಪೆನಾಲ್ಟಿ ಮೊರೆಹೋಗಬೇಕಾಯಿತು.

ಪಂದ್ಯದ ಪೂರ್ಣ ಅವಧಿಯವರೆಗೆ ಎರಡು ತಂಡಗಳು ಯಾವುದೇ ಗೋಲ್ ಗಳಿಸಿರಲಿಲ್ಲ. ಹೆಚ್ಚುವರಿ ಅವಧಿಯಲ್ಲಿ ಎರಡೂ ತಂಡಗಳು ತಲಾ 1 ಗೋಲ್ ಗಳಿಸಿ ಸಮಬಲ ಸಾಧಿಸಿದ್ದವು. ಪೆನಾಲ್ಟಿ ಶೂಟೌಟ್ ನಲ್ಲಿ ಕ್ರೊವೇಷಿಯಾ 4-2 ಅಂತರದಿಂದ ಗೆಲುವಿನ ಕೇಕೆ ಹಾಕಿತು.

ಈ ಮೂಲಕ 5ಬಾರಿಯ ಚಾಂಪಿಯನ್, ಜಗತ್ತಿನ ಅತಿಬಲಿಷ್ಠ ಫುಟ್ಬಾಲ್ ತಂಡವೆಂಬ ಪ್ರಖ್ಯಾತಿ ಪಡೆದಿದ್ದ ಬ್ರೆಜಿಲ್ ಸೆಮಿಫೈನಲ್ ಪ್ರವೇಶದಿಂದ ವಂಚಿತವಾಯಿತು. ಸೋತ ನಿರಾಸೆಯಲ್ಲಿ ಬ್ರೆಜಿಲ್ ಆಟಗಾರರು ಮತ್ತು ಅಭಿಮಾನಿಗಳು ಬಿಕ್ಕಿಬಿಕ್ಕಿ ಕಣ್ಣೀರು ಸುರುಸಿದರು.

ನೇಮರ್ ನಂತಹ ಸ್ಟಾರ್ ಆಟಗಾರರನ್ನು ಹೊಂದಿದ್ದ ಬ್ರೆಜಿಲ್ ತಂಡವನ್ನು ಮಣಿಸಿ ಕ್ರೊವೇಷಿಯಾ ಪಂದ್ಯಾವಳಿಯ ಅಚ್ಚರಿಯ ಫಲಿತಾಂಶ ನೀಡಿ ಸೆಮಿಫೈನಲ್ ಪ್ರವೇಶಿಸಿತು.

ನೆದರ್ಲೆಂಡ್ ಮಣಿಸಿ ಸೆಮಿಫೈನಲ್ ಗೆ ಲಗ್ಗೆಯಿಟ್ಟ ಅರ್ಜೆಂಟೈನಾ
ನಿನ್ನೆ ತಡರಾತ್ರಿ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಸಹ ಪೆನಾಲ್ಟಿ ಮೂಲಕವೇ ಫಲಿತಾಂಶ ಕಂಡಿತು. ಈ ಪಂದ್ಯದಲ್ಲಿ ಅರ್ಜೆಂಟೈನಾ ತಂಡ ನೆದರ್ಲೆಂಡ್ ತಂಡವನ್ನು ಮಣಿಸಿ ಸೆಮಿಫೈನಲ್ ಗೆ ಮುನ್ನಡೆ ಸಾಧಿಸಿತು.

ಈ ಪಂದ್ಯದಲ್ಲಿ ಮೊದಲು ಎರಡು ಗೋಲು ಗಳಿಸಿ ಮುನ್ನಡೆ ಸಾಧಿಸಿದ್ದ ಅರ್ಜೆಂಟೈನಾ ಸುಲಭದ ಜಯಗಳಿಸುತ್ತದೆ ಎಂಬ ಹಂತದಲ್ಲಿದ್ದಾಗ ಕೊನೆಯ ಕ್ಷಣದಲ್ಲಿ ಎರಡು ಮಿಂಚಿನ ಗೋಲುಗಳಿಸಿದ ನೆದರ್ಲೆಂಡ್ ತಂಡ ಹೆಚ್ಚುವರಿ ಅವಧಿಯವರೆಗೆ ಪಂದ್ಯದಲಿ ಸಮಬಲ ಸಾಧಿಸಿದರು.
ಕೊನೆಗೆ ಫಲಿತಾಂಶಕ್ಕಾಗಿ ಪೆನಾಲ್ಟಿ ಮೊರೆ ಹೋದಾಗ ಅರ್ಜೆಂಟೈನಾ 4-2 ಗೋಲುಗಳ ಅಂತರದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿತು.

ಎರಡು ಬಾರಿ ಚಾಂಪಿಯನ್ ಅರ್ಜೆಂಟೈನಾ ತಂಡವು ಈ ಬಾರಿ ಪ್ರಶಸ್ತಿಗೆಲ್ಲುವ ಫೆವರೇಟ್ ತಂಡಗಳಲ್ಲಿ ಒಂದಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ