October 5, 2024

ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದೆ.

ಗುಜರಾತ್ ವಿಧಾನಸಭೆಯಲ್ಲಿ ಬಿ.ಜೆ.ಪಿ ಭರ್ಜರಿ ಜಯಭೇರಿ ಬಾರಿಸಿದೆ. ರಾಜ್ಯದ 182 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 1 ಮತ್ತು 5 ರಂದು 2 ಹಂತದಲ್ಲಿ ಚುನಾವಣೆ ನಡೆದಿತ್ತು. ಸರಳ ಬಹುಮತಕ್ಕೆ 92 ಅವಶ್ಯಕತೆ ಇತ್ತು. ಆದರೆ ಬಿ.ಜೆ.ಪಿ.ಇಲ್ಲಿ 157 ಸ್ಥಾನಗಳನ್ನು ಮೀರಿ ಮುನ್ನಡೆದಿದೆ. ಇದು ಬಿ.ಜೆ.ಪಿ.ಗೆ ಗುಜರಾತಿನಲ್ಲಿ ಸಾರ್ವಕಾಲಿಕ ಐತಿಹಾಸಿಕ ಸಾಧನೆದ ಭರ್ಜರಿ ಬಹುಮತವಾಗಿದೆ.

ಗುಜರಾತ್ ಹಾಲಿ ಮುಖ್ಯಮಂತ್ರಿ ಭೂಪೇಂದ್ರಬಾಯ್ ಪಟೇಲ್ ಮತ್ತೆ ಮುಖ್ಯಮಂತ್ರಿಯಾಗಿ ಇದೇ 12ನೇ ತಾರೀಖಿನಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೇಸ್ 16 ಸ್ಥಾನ, ಆಮ್ ಆದ್ಮಿ 5, ಇತರೆ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.  ಗುಜರಾತಿನಲ್ಲಿ  ಕಾಂಗ್ರೇಸ್   ದೂಳಿಪಟವಾಗಿದೆ, ಬಾರೀ ನಿರೀಕ್ಷೆ ಹುಟ್ಟಿಸಿದ್ದ ಆಮ್ ಆದ್ಮಿ ಪಕ್ಷ ಹೆಚ್ಚೇನು ಸಾಧನೆ ಮಾಡಲು ಸಾಧ್ಯವಾಗಿಲ್ಲ.

ರಾಜ್ಯದಲ್ಲಿ ಬಿ.ಜೆ.ಪಿ.ಸತತ ಆರನೇ ಅವಧಿಗೆ ಅಧಿಕಾರದ ಗದ್ದುಗೆ ಏರಿದೆ. 2017ರಲ್ಲಿ ಬಿ.ಜೆ.ಪಿ. 110 ಸ್ಥಾನ, ಕಾಂಗ್ರೇಸ್ 60 ಸ್ಥಾನಗಳಲ್ಲಿ ಜಯಗಳಿಸಿತ್ತು.

ಈ ಬಾರಿ ಬಿಜೆಪಿ ಎಲ್ಲಾ ನಿರೀಕ್ಷೆ ಮತ್ತು ಸಮೀಕ್ಷೆಗಳನ್ನು ಮೀರಿ ಅಭೂತಪೂರ್ವ ಸಾಧನೆ ಮಾಡಿದೆ. ಮೋದಿಯವರ ತವರು ರಾಜ್ಯದಲ್ಲಿ ದೊರೆತಿರುವ ಈ ಜಯ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಶಕ್ತಿ ತುಂಬಿದೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೇಸ್ ಸರಳಬಹುಮತದತ್ತ ಸಾಗುತ್ತಿದೆ. 68 ಸ್ಥಾನಗಳ ವಿಧಾನಸಭೆಯಲ್ಲಿ ಸರಳಬಹುಮತಕ್ಕೆ 35 ಸ್ಥಾನಗಳ ಅವಶ್ಯಕತೆ ಇದ್ದು, ಇತ್ತೀಚಿನ ವರದಿಗಳ ಪ್ರಕಾರ ಕಾಂಗ್ರೇಸ್ 39, ಬಿ.ಜೆ.ಪಿ.26 ಹಾಗೂ ಇತರರು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ಹಾಲಿ ಹಿಮಾಚಲದಲ್ಲಿ ಅಧಿಕಾರದಲ್ಲಿದ್ದ ಬಿ.ಜೆ.ಪಿ. ಈ ಬಾರಿ ಬಹುಮತ ಗಳಿಸಲು ವಿಫಲವಾಗಿದೆ. ಹಿಮಾಚಲದ ಗೆಲುವು ಕಾಂಗ್ರೇಸ್ ಗೆ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ