October 5, 2024

ಸರ್ಕಾರ ಕೆಲ ತಿಂಗಳ ಹಿಂದೆ ನಾಲ್ಕು ಚಕ್ರ ವಾಹನವಿದ್ದ ಕೆಲವು ಕುಟುಂಬಗಳ ಬಿ.ಪಿ.ಎಲ್. ಪಡಿತರ ಚೀಟಿಯನ್ನು ವಜಾಗೊಳಿಸಿದೆ. ಮತ್ತೆ ಕೆಲವರಿಂದ ದಂಡವನ್ನು ಸಹ ವಸೂಲಿ ಮಾಡಿದೆ. ಈ ಕ್ರಮಕ್ಕೆ ರಾಜ್ಯದಾದ್ಯಂತ ವ್ಯಾಪಕವಾದ ವಿರೋಧ ವ್ಯಕ್ತವಾಗಿತ್ತು.

ನಮ್ಮ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಯವರು ಇದರ ವಿರುದ್ಧ ವಿಧಾನಸೌಧದ ಎದುರೆ ಮಾಧ್ಯಮದೆದುರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಅವರು ಮೂಡಿಗೆರೆ ಕ್ಷೇತ್ರದಲ್ಲಿ ನಾಲ್ಕು ಚಕ್ರ ವಾಹನವಿದೆ ಎಂದು ರದ್ದಾಗಿರುವ ಬಡ ಕುಟುಂಬದವರು ಮತ್ತೆ ಅರ್ಜಿ ಸಲ್ಲಿಸಲು ಮನವಿ ಮಾಡಿದ್ದಾರೆ.

ವಾಟ್ಸಾಪ್ ಮತ್ತು ಫೇಸ್ಬುಕ್ ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಅವರು ಪತ್ರ ಬರೆದಿದ್ದಾರೆ.

ಆತ್ಮೀಯ ನನ್ನೆಲ್ಲಾ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ನಾಗರಿಕ ಬಂಧುಗಳೇ….
ಸರ್ಕಾರವು ಕಳೆದ ಕೆಲವು ತಿಂಗಳುಗಳಲ್ಲಿ ನಾಲ್ಕು ಚಕ್ರ ವಾಹನವಿದ್ದ ಕೆಲವು ನಾಗರೀಕರ ಬಿಪಿಎಲ್ ಕಾರ್ಡನ್ನು ರದ್ದುಗೊಳಿಸಿತ್ತು. ಇದನ್ನು ಸರ್ಕಾರದ ಗಮನಕ್ಕೆ ತಂದು ರದ್ದುಗೊಳಿಸುವ ಆದೇಶವನ್ನು ಹಿಂಪಡೆಸಲು ಯಶಸ್ವಿಯಾಗಿದ್ದೆವು. ನಂತರ ರದ್ದಾದ ಬಿಪಿಎಲ್ ಕಾರ್ಡುದಾರರಿಗೆ ಪುನಃ ಅರ್ಜಿ ಹಾಕಲು ತಿಳಿಸಿದ್ದೆವು. ಅಧಿಕಾರಿಗಳು ನೂತನ ಆದೇಶ ಬೇಕು ಎಂದು ಅರ್ಜಿದಾರರಿಗೆ ತಿಳಿಸಿದ್ದಾರೆ ಎಂಬುವುದು ನನ್ನ ಗಮನಕ್ಕೆ ಬಂದಿತ್ತು. ಆದರೆ ಈಗ ನಾನೇ ಖುದ್ದಾಗಿ ಆಹಾರ ಮತ್ತು ನಾಗರಿಕ ಸಚಿವಾಲಯದ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿರುವ ಆಯುಕ್ತರು ಯಾವುದೇ ಹೊಸ ಆದೇಶ ಅವಶ್ಯಕತೆ ಇಲ್ಲ, ಈಗ ತಕ್ಷಣವೇ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ತಿಳಿಸಿ ಎಂದು ಹೇಳಿದ್ದರು.

ಅದರಂತೆ ಬಂಧುಗಳೇ, ನಾಲ್ಕು ಚಕ್ರ ವಾಹನ ಇರುವ ಹಾಗೂ ಈಗಾಗಲೇ ಬಿಪಿಎಲ್ ಕಾರ್ಡ್ ಇದ್ದು ಅದನ್ನು ಕಳೆದುಕೊಂಡಿರುವ ಕುಟುಂಬದವರು ತಕ್ಷಣವೇ ಅರ್ಜಿ ಸಲ್ಲಿಸಲು ಮನವಿ ಮಾಡುತ್ತೇನೆ, ಅರ್ಜಿ ಸಲ್ಲಿಸಲು ಹೋದ ಸಮಯದಲ್ಲಿ ಅರ್ಜಿದಾರರಿಗೆ ಅಧಿಕಾರಿಗಳು ವಿಳಂಬ ಮಾಡಿದಲ್ಲಿ ಅಥವಾ ಯಾವುದೇ ಸಲಹೆ ನೀಡಿದಲ್ಲಿ ತಕ್ಷಣವೇ ನನ್ನ ಗಮನಕ್ಕೆ ತರಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ….

ಧನ್ಯವಾದಗಳೊಂದಿಗೆ
ಎಂ.ಪಿ. ಕುಮಾರಸ್ವಾಮಿ
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ