October 5, 2024

ಕತಾರ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಜಪಾನ್ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಎಡವಿ ಟೂರ್ನಮೆಂಟ್ ನಿಂದ ಹೊರನಡೆಯಿತು. ಕ್ರೊವೇಷಿಯಾ ಕ್ವಾರ್ಟರ್ ಗೆ ಫೈನಲ್ ಗೆ ಮುನ್ನಡೆಯಿತು.

ಪೂರ್ಣಅವಧಿಯಲ್ಲಿ ಎರಡು ತಂಡಗಳು 1-1 ಗೋಲುಗಳೊಂದಿಗೆ ಸಮಬಲ ಸಾಧಿಸಿದ್ದವು. ನಂತರ ಹೆಚ್ಚುವರಿ 30 ನಿಮಿಷಗಳಲ್ಲಿಯೂ ಎರಡು ತಂಡಗಳು ಗೋಲು ಗಳಿಸಲು ವಿಫಲವಾದವು. ನಂತರ ವಿಜೇತರ ನಿರ್ಣಯಕ್ಕೆ ಫೆನಾಲ್ಟಿ ಶೌಟೌಟ್ ಮೊರೆಹೋಗಲಾಯಿತು. ಆಗ ಜಪಾನ್ ಗೆ ಕ್ರೋವೇಷಿಯಾ ಗೋಲ್ ಕೀಪರ್ ಡೊಮಿನಿಕ್ ತಡೆಗೋಡೆಯಾದರು. ಜಪಾನ್ ನ ಮೂರು ಫೆನಾಲ್ಟಿ ಪ್ರಯತ್ನಗಳನ್ನು ವಿಫಲಗೊಳಿಸಿದರು. ತನ್ನ ತಂಡವನ್ನು ಎಂಟರ ಘಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸ್ಪೇನ್ ಮತ್ತು ಜರ್ಮನಿಯಂತಹ ಬಲಿಷ್ಠ ತಂಡಗಳನ್ನು ಸೋಲಿಸಿ ಮುನ್ನಡೆದಿದ್ದ ಜಪಾನ್ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿತು. ಈ ಮೂಲಕ ಜಪಾನ್ ಅಭಿಮಾನಿಗಳು ತೀವ್ರ ನಿರಾಸೆಯಿಂದ ಕಣ್ಣೀರಿಟ್ಟರು.

ಬ್ರಿಜಿಲ್ ಗೆ ಮಣಿದ ದಕ್ಷಿಣ ಕೊರಿಯಾ ; ಏಷ್ಯಾ ತಂಡಗಳ ಅಭಿಯಾನ ಅಂತ್ಯ

ತಡರಾತ್ರಿ ನಡೆದ ಇನ್ನೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಬ್ರಿಜಿಲ್ ತಂಡವು ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲಗಳಿಂದ ಮಣಿಸಿತು. ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದ ಬ್ರಿಜಿಲ್ ತಂಡ ದಕ್ಷಿಣ ಕೊರಿಯಾವನ್ನು ಸುಲಭವಾಗಿ ಸೋಲಿಸಿತು.

ಜಪಾನ್ ಮತ್ತು ದಕ್ಷಿಣ ಕೋರಿಯಾ ತಂಡಗಳು ಟೂರ್ನಿನಿಂದ ಹೊರಬೀಳುವ ಮೂಲಕ ಫಿಪಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯಲ್ಲಿ ಏಷ್ಯಾ ತಂಡಗಳ ಅಭಿಯಾನ ಅಂತ್ಯವಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ