October 5, 2024

ಮಣ್ಣು ಇದ್ದರೆ ನಾವೆಲ್ಲಾ. ಮಣ್ಣಿನ ಫಲವತ್ತತೆ ನಾಶವಾದರೆ ಜಗತ್ತೇ ಸರ್ವ ನಾಶವಾಗುತ್ತದೆ. ಹಾಗಾಗಿ ಮಣ್ಣು ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಮೂಡಿಗೆರೆ  ಬೆಳೆಗಾರರ ಸಂಘದ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಹೇಳಿದರು.

ಅವರು ಇಂದು ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬೆಳೆಗಾರರ ಸಂಘ, ಕೆವಿಕೆ, ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಸಾಯನಿಕ ಬಳಿಕೆಯಿಂದಾಗಿ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದೆ. ನಮ್ಮ ತಾಲೂಕಿನಲ್ಲಿ ಉತ್ತಮ ವಿಜ್ಞಾನಿಗಳಿರುವುದು ರೈತರಿಗೆ ವರದಾನವಾಗಿದೆ. ಅವರ ಸಲಹೆ, ಮಾರ್ಗದರ್ಶನ ಪಡೆದುಕೊಂಡು ಭೂಮಿ ತಾಯಿ ರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಅವರು ಮಣ್ಣು ರಕ್ಷಣೆಯ ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿ, ಅನೇಕ ಕವಿಗಳು ಮಣ್ಣಿನ ಮಹತ್ವದ ಬಗ್ಗೆ ಹಿಂದೆಯೇ ತಿಳಿಸಿದ್ದಾರೆ. ಆದರೂ ಎಚ್ಚೆತ್ತುಕೊಂಡಿಲ್ಲ. ರಾಸಾಯನಿಕ ಬಳಕೆ, ಪನ್ಸಿಲ್ ಮರಗಸಿಯಂತಹ ಮಣ್ಣಿಗರ ಮಾರಕವಾದ ಕೃಷಿ ಪದ್ಧತಿ .ನಿಲ್ಲಿಸಬೇಕು. ಮಣ್ಣಿನಲ್ಲಿ ಜೀವಾಣುಗಳು ಜೀವಂತವಾಗಿರಿಸಲು ಸಾವಯವ ಕೃಷಿ ಪದ್ಧತಿ ನಡೆಸಬೇಕು. ಪರಿಸರ, ಮಣ್ಣು, ಜೀವಾಣು ಸಂರಕ್ಷಣೆಗಾಗಿ ಯುವ ಜನತೆ ಮುಂದಾಗಬೇಕಿದೆ ಎಂದು ಹೇಳಿದರು.

ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಹೆಚ್.ಟಿ.ಮೋಹನ್‌ಕುಮಾರ್ ಮಾತನಾಡಿ
ವೈದ್ಯರು, ಎಂಜಿನಿಯರ್ಸ್, ರಾಜಕಾರಣಗಳಿಗೆ ಅಗ್ರಸ್ಥಾನ ನೀಡಲಾಗುತ್ತಿದೆ. ಆದರೆ ವಿಶ್ವಕ್ಕೆ ಅನ್ನ ನೀಡುವ ರೈತನಿಗೆ ಅಗ್ರಸ್ಥಾನ ಸಿಗದಿರುವುದು ದುರಂತ. ರೈತರಿಗೆ ಅಗ್ರಸ್ಥಾನ ಸಿಗಬೇಕು. ಮಣ್ಣು ಮಾಣಿಕ್ಯ. ಮಣ್ಣಿನಲ್ಲಿ ಪೆಟ್ರೋಲಿಯಂ, ನೀರು, ಗಾಳಿ, ಸಹಿತ ಶೇ.30ರಷ್ಟು ಖನಿಜ ದೊರೆಯುತ್ತದೆ. ಪ್ಲಾಸ್ಟಿಕ್‍ನಂತಹ ಮಾರಕ ವಸ್ತುವನ್ನು ತ್ಯಜಿಸಿ ಸ್ವಚ್ಛತೆ ಕಾಡಾಡುವ ಮೂಲಕ ಮಣ್ಣು ರಕ್ಷಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ನಾರಾಯಣ್ ಎಸ್.ಮಾವರ್ಕರ್ ವಹಿಸಿದ್ದರು. ಬೆಳಗಾರರ ಸಂಘದ ಕಾರ್ಯದರ್ಶಿ ಕೆ.ಡಿ.ಮನೋಹರ್, ಮಾಜಿ ಅಧ್ಯಕ್ಷ ಬಸವರಾಜು, ರೈತ ಉತ್ಪಾಧಕರ ಸಂಘದ ಅಧ್ಯಕ್ಷ ಪೂರ್ಣೇಶ್, ಕೆವಿಕೆ ಹಿರಿಯ ವಿಜ್ಞಾನಿ ಡಾ.ಎ.ಟಿ.ಕೃಷ್ಣಮೂರ್ತಿ, ಬೆಳೆಗಾರ ಪತ್ರಿಕೆ ಸಂಪಾದಕ ಸುರೇಂದ್ರ ಮತ್ತಿತರರಿದ್ದರು.
*****

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ