October 5, 2024

✍️ ಅವರೇಕಾಡು ಪೃಥ್ವಿ

9241320700

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸಭೆ ಸಮಾರಂಭ, ವಿವಾಹ ಇನ್ನಿತರೆ ಕಾರ್ಯಕ್ರಮಗಳಲಿ ಊಟಕ್ಕೆ ಉಪಯೋಗಿಸಿ ಎಸೆಯುವ 250 ml ಇಂದ 500 ml ವರೆಗಿನ ಕುಡಿಯುವ ನೀರಿನ ಬಾಟಲಿಗಳನ್ನು ಪ್ರತಿಯೊಬ್ಬರಿಗೂ ನೀಡುತ್ತಾರೆ.

ಅದರಲ್ಲಿ ಕೆಲವರು ಜನ ಸಂಪೂರ್ಣ ಉಪಯೋಗಿಸುತ್ತಾರೆ, ಅನೇಕರು ಸಂಪೂರ್ಣ ಉಪಯೋಗಿಸುವುದಿಲ್ಲ, ಈ ಉಪಯೋಗಿಸಿದ ಬಾಟಲಿಯನ್ನು ಅಲ್ಲೇ ಎಲ್ಲೊ ಹಾಕುತ್ತಾರೆ

ನಮ್ಮ ರಾಜ್ಯದಲ್ಲಿ ಇಂತಹ ಸಾವಿರಾರು ಕಾರ್ಯಕ್ರಮಗಳು ದಿನನಿತ್ಯ ನಡೆಯುತ್ತವೆ. ಬೆಂಗಳೂರು ನಗರದಲ್ಲೇ ಇಂತ ಸಾವಿರಾರು ಸ್ಥಳಗಳು ಇವೆ, ಒಂದು ದಿನಕ್ಕೆ
ಇಂತ ಸಮಾರಂಭದಲ್ಲಿ ಬಳಸಿ ಬಿಸಾಡುವ ನೀರಿನ ಬಾಟೆಲ್, ಊಟದಲ್ಲಿ ಇನ್ನಿತರ ತಿನಿಸು ತಿನ್ನಲು ಬಳಸುವ ಪ್ಲಾಸ್ಟಿಕ್ ಬೌಲ್ ಗಳು, ಸ್ಪೂನ್ ಗಳ ತ್ಯಾಜ್ಯ ಎಷ್ಟೊಂದು ಉತ್ಪಾದನೆ ಆಗುತ್ತದೆ. ಇದರಿಂದ ಪ್ರಕೃತಿಗೆ ಎಷ್ಟೊಂದು ಮಾಲಿನ್ಯ

ಒಂದು ಸಾರ್ವಜನಿಕ ಕಾರ್ಯಕ್ಕೆ ಉಪಯೋಗಿಸುವ ಸಭಾಂಗಣ ನಿರ್ಮಾಣ ಮಾಡುವಾಗ ಸರ್ಕಾರ ಸಾಕಷ್ಟು ಪ್ರಮಾಣದ ನೀರಿನ ವ್ಯವಸ್ಥೆ, ಶೌಚಾಲಯ ಇದ್ದರೆ ಮಾತ್ರ ಅನುಮತಿ ಕೊಡಬೇಕು, ಹಾಗೆ ಅಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದ್ದರೆ ಮಾತ್ರ ಅನುಮತಿ ಕೊಡಬೇಕು.

ಕುಡಿಯಲು 20 ಲೀಟರ್ ನೀರಿನ ಕ್ಯಾನ್ ತಂದು ಉಪಯೋಗಿಸಲು ಮಾತ್ರ ಅನುಮತಿ ಕೊಡಬೇಕು, ಅದು ಬಿಟ್ಟು ಯಾವುದೇ ಕುಡಿಯುವ ನೀರಿನ ಬಾಟಲ್ ಉಪಯೋಗಿಸಲು ಅನುಮತಿ ನೀಡಬಾರದು, ಜೊತೆಗೆ ಪ್ಲಾಸ್ಟಿಕ್ ಬೌಲ್ ಸ್ಪೂನ್ ಗಳನ್ನು ಸಹ ನಿಷೇಧಿಸಬೇಕು. ಪೇಪರ್ ಲೋಟ, ಬೌಲ್ ಗಳನ್ನು ಮಾತ್ರ ಬಳಸಲು ಅನುಮತಿ ನೀಡಬೇಕು.

ಹೀಗಿ ಬಿಟ್ಟರೆ ಭೂಮಿ ಮೇಲೆ ಪ್ಲಾಸ್ಟಿಕ್ ಗಳೇ ಹಾಸಿದಂತಾಗುವುದರಲ್ಲಿ ಅನುಮಾನವೇ ಇಲ್ಲ.
ಇನ್ನು ಪರಿಸರ ಜಾಗೃತಿ ಅನ್ನುವ ಪದಕ್ಕೆ ಅರ್ಥವ ಇಲ್ಲ, ಎಲ್ಲ ವಿಷಯ ಎಲ್ಲರಿಗೂ ಗೊತ್ತು. ಕಠಿಣ ಕಾನೂನುಗಳಿಂದ ಮಾತ್ರ ಇಂತಹ ವಿಕೃತಿಗಳನ್ನು ನಿಯಂತ್ರಿಸಬೇಕು.
ದಂಡಂ ದಶ ಗುಣಂ

ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸುವುದು ಒಳಿತು, ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ

 

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ