October 5, 2024

ಮೂಡಿಗೆರೆ ಪಟ್ಟಣದಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ಸರ್ವ ಸದಸ್ಯರ ಸಭೆಯಲ್ಲಿ ತಾಲ್ಲೂಕು ಮತ್ತು ಹೋಬಳಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಒಕ್ಕೂಟದ ಮೂಡಿಗೆರೆ ತಾಲೂಕು ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ವೆಂಕಟೇಶ್ ಆಯ್ಕೆಯಾಗಿದ್ದಾರೆ.

ಬಣಕಲ್ ಹೋಬಳಿ ಅಧ್ಯಕ್ಷರಾಗಿ ರಘು ಆಚಾರ್ಯ, ಗೋಣಿಬೀಡು ಹೋಬಳಿ ಅಧ್ಯಕ್ಷರಾಗಿ ಪ್ರದೀಪ್, ಕಸಬಾ ಹೋಬಳಿ ಅಧ್ಯಕ್ಷರಾಗಿ ಯೋಗೇಶ್ ಪೂಜಾರಿ, ತಾಲೂಕು ಕಾರ್ಯದರ್ಶಿಯಾಗಿ ಕುಮಾರ್ ರಾಜ್ ಅರಸ್, ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳಾಗಿ ಚಂದ್ರು ನಿಡುವಾಳೆ, ಯು.ಹೆಚ್. ಹೇಮಶೇಖರ್, ಯೋಗೇಶ್, ಕೇಶವ ಸುವರ್ಣ, ಜಗನ್‍ಮೋಹನ್, ಸುಧಾಕರ್, ವಿ.ಪಿ.ನಾರಾಯಣ, ಕಮಲಮ್ಮ, ಪ್ರವೀಣ್ ಪೂಜಾರಿ, ಗೀತಾ, ದಿವಾಕರ್, ಪ್ರಸನ್ನಕುಮಾರ್, ಮಂಜುನಾಥ್ ಆಚಾರ್ಯ, ಪದ್ಮಶ್ರೀ, ನಾಗರಾಜು, ಉಮಾಶಂಕರ್, ಗೋಪಾಲ, ಶೇಷಪ್ಪ, ಶಿವಾನಂದ ಅವರನ್ನು ಆಯ್ಕೆ ಮಾಡಲಾಯಿತು.

ಮೂಡಿಗೆರೆ ತಾಲ್ಲೂಕು ಹಿಂದುಳಿದ ವರ್ಗಗಳ ಒಕ್ಕೂಟವು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದೆ. ತಾಲ್ಲೂಕಿನ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಲು ಒಕ್ಕೂಟವನ್ನು ರಚಿಸಲಾಗಿದೆ. ಒಕ್ಕೂಟದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರು ಇದ್ದಾರೆ. ರಾಜಕೀಯ ರಹಿತವಾಗಿ ಸಮಾಜದಲ್ಲಿ ನೊಂದವರ ಪರವಾಗಿ ಕೆಲಸ ಮಾಡುವುದು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಬಲಿಕರಣಕ್ಕಾಗಿ ಒಕ್ಕೂಟವು ಶ್ರಮಿಸಲಿದೆ ಎಂದು ತಾಲ್ಲೂಕು ಅಧ್ಯಕ್ಷರಾದ ಕೆ. ವೆಂಕಟೇಶ್ ತಿಳಿಸಿದ್ದಾರೆ.

 

ಅಸ್ಸಾಂ ಕಾರ್ಮಿಕರ ವೇಷದಲ್ಲಿ ದರೋಡೆಕೋರರು ; ಇವರ ಕೃತ್ಯ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ