October 5, 2024

ಸಾರ್ವಜನಿಕರು ತಮ್ಮ ಜಮೀನಿಗೆ ಸಂಬAಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರ ನಕ್ಷೆಗಳನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬಹುದು ಎಂದು ಸರ್ವೇ ಮಾಪನ ಮತ್ತು ಭೂ ದಾಖಲೆಗಳ ಆಯುಕ್ತರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರೆ ನಕ್ಷೆಗಳಿಗೆ ಅರ್ಜಿ ಸಲ್ಲಿಸಿದ ನಾಗರಿಕರು
http://103,138,196,154/Service19/Report/ApplicationDetails ವೆಬ್‌ಸೈಟ್ ಮೂಲಕ ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಸಹ ವೀಕ್ಷಿಸಬಹುದು. ಅರ್ಜಿ ಸ್ವೀಕಾರಗೊಂಡು ಸರ್ವೇ ಸಿಬ್ಬಂದಿ ತಮ್ಮ ಜಮೀನಿಗೆ ಬಂದು ಸಂಬAಧಿಸಿದ ಮಾಪನ ಕಾರ್ಯ ಮುಗಿಸಿ ನಕ್ಷೆ ಅನುಮೋದಿಸಿದ ತಕ್ಷಣ ಇದೇ ವೆಬ್‌ಸೈಟ್ ನಲ್ಲಿ ಆ ನಕ್ಷೆಗಳನ್ನು ಸಾರ್ವಜನಿಕರು ಮುದ್ರಣ ಪ್ರತಿ ತೆಗೆದು ಕೊಳ್ಳಬಹುದು. ಅರ್ಜಿ ಸಲ್ಲಿಸುವಾಗ ನಾಗರೀಕರು ಹಣ ಪಾವತಿಸಿ ರುವ ಕಾರಣ ನಕ್ಷೆ ಪ್ರತಿಗಳನು ಡೌನ್‌ಲೋಡ್ ಮಾಡಿಕೊಂಡು ಮುದ್ರಣ ಪ್ರತಿ ಪಡೆಯಲು ಯಾವುದೇ ಹೆಚ್ಚುವರಿ ಹಣ ಕೊಡಬೇಕಾಗಿರುವುದಿಲ್ಲ. ಇದರಿಂದ ತಮ್ಮ ನಕ್ಷೆಗಳ ಪ್ರಿಂಟ್‌ಔಟ್ ಪಡೆಯಲು ಸರ್ವೇ ಕಛೇರಿಗಳಿಗೆ ಹೋಗಬೇಕಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ನಾಗರಿಕರು ಯಾವ ನಕ್ಷೆಗೆ ಅರ್ಜಿ ಸಲ್ಲಿಸಿರುತ್ತಾರೋ ಆ ಅರ್ಜಿ ಸಂಖ್ಯೆ, ಮೊಬೈಲ್ ಸಂಖ್ಯೆ, ಸರ್ವೇ ನಂಬರ್, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್ ಹೀಗೆ ವಿವಿಧ ಮಾಹಿತಿಗಳನ್ನು ದಾಖಲಿಸಿ ತಮ್ಮ ನಕ್ಷೆ ಪಡೆದುಕೊಳ್ಳಬಹುದಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ